ಬೆಂಗಳೂರು: ರಾಜ್ಯದ ಯುವಕರಿಗೆ ತಾಂತ್ರಿಕವಾಗಿ ಹೆಚ್ಚಿನ ಕೌಶಲ ಒದಗಿಸಲು ನಾಸ್ಕಾಂ ಪ್ರತಿಷ್ಠಾನವು ಜಾಗತಿಕ ಹಣಕಾಸು ತಂತ್ರಜ್ಞಾನ ಕಂಪನಿ ಐಜಿ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದಿಂದಾಗಿ ರಾಜ್ಯದ ಮುನ್ನೂರು ಯುವಕರಿಗೆ ಪ್ರಯೋಜನ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ. ‘ಇಂದಿನ ಡಿಜಿಟಲ್ ಅರ್ಥ ವ್ಯವಸ್ಥೆಯ ಕಾಲಘಟ್ಟದಲ್ಲಿ ಯುವಕರಿಗೆ ಡಿಜಿಟಲ್ ಕೌಶಲಗಳನ್ನು ಕಲಿಸುವ ಅಗತ್ಯ ಇದೆ’ ಎಂದು ನಾಸ್ಕಾಂ ಪ್ರತಿಷ್ಠಾನದ ಅಧ್ಯಕ್ಷೆ ನಿಧಿ ಭಾಸಿನ್ ಹೇಳಿದ್ದಾರೆ.
‘ನಾವು ಸ್ಥಳೀಯವಾಗಿ ನೂರಾರು ಯುವಕರನ್ನು ನೇಮಕ ಮಾಡಿಕೊಂಡಿದ್ದೇವೆ. ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಮಾಜಕ್ಕೆ ಹಿಂದಿರುಗಿ ಏನಾದರೂ ಕೊಡಬೇಕು ಎಂಬ ಉದ್ದೇಶ ನಮಗಿದೆ. ನಾಸ್ಕಾಂ ಪ್ರತಿಷ್ಠಾನದ ಜೊತೆಗಿನ ಒಪ್ಪಂದವು ನಮ್ಮ ಉದ್ದೇಶಕ್ಕೆ ಪೂರಕವಾಗಿದೆ’ ಎಂದು ಐಜಿ ಗ್ರೂಪ್‌ನ ಜಾಗತಿಕ ಸಿಒಒ ಜಾನ್ ನೋಬಲ್ ಹೇಳಿದ್ದಾರೆ.
ನಾಸ್ಕಾಂ ಪ್ರತಿಷ್ಠಾನ ಮತ್ತು ಐಜಿ ಗ್ರೂಪ್ ನಡುವಿನ ಒಪ್ಪಂದವು ಬೆಂಗಳೂರಿನ ಯುವಕರು ಮತ್ತು ಯುವತಿಯರಿಗೆ ನೆರವು ನೀಡಲಿದೆ ಎಂದು ಪ್ರಕಟಣೆ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.