ಆರು ಹಾಗೂ ಏಳು ಆಸನಗಳ ಸಾಮರ್ಥ್ಯದಲ್ಲಿ ಈ ವಾಹನ ಲಭ್ಯವಿರಲಿದೆ. ಕ್ಯಾಬಿನ್ ಹೈಟೆಕ್ ಮತ್ತು ಆರಾಮದಾಯಕ ಅನುಭವವನ್ನು ನೀಡಲಿದೆ. ವಾಹನದಲ್ಲಿ 8 ಸ್ಪೀಕರ್ ವ್ಯವಸ್ಥೆ, ಮಳೆಯ ಸೆನ್ಸಿಂಗ್ ವೈಪರ್‌ಗಳು, ಪಾರ್ಕಿಂಗ್ ಸೆನ್ಸಾರ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಆರು ಏರ್ ಬ್ಯಾಗ್‌ಗಳು, 4 ಡಿಸ್ಕ್ ಬ್ರೇಕ್‌ಗಳು, 40 ಪ್ರಮಾಣಿತ ಮತ್ತು 70ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳು ಇರಲಿವೆ. 9 ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದ್ದು, 8 ಮೊನೊ–ಟೋನ್ ಆಯ್ಕೆ ಹೊಂದಿರಲಿದೆ. ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.