ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ನಿಯಮ; ‘ಸಣ್ಣ ಕಂಪನಿಗಳಿಗೆ ಸ್ಪರ್ಧೆ ಕಷ್ಟ’

Last Updated 28 ಫೆಬ್ರುವರಿ 2021, 18:33 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ರೂಪಿಸಿರುವ ನಿಯಮಗಳಿಂದಾಗಿ ನಿಯಮ ಪಾಲನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ, ಬೃಹತ್ ಕಂಪನಿಗಳ ಎದುರು ಸಣ್ಣ ಕಂಪನಿಗಳು ಸ್ಪರ್ಧಿಸುವುದೇ ಅಸಾಧ್ಯವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಕಳೆದವಾರಜಾರಿಮಾಡಿರುವನಿಯಮಗಳು,50ಲಕ್ಷಬಳಕೆದಾರರಮಾನದಂಡವನ್ನಿಟ್ಟುಕೊಂಡು ‘ಸಾಮಾಜಿಕ ಮಾಧ್ಯಮಗಳು’ ಮತ್ತು ‘ಮಹತ್ವದ ಸಾಮಾಜಿಕ ಮಾಧ್ಯಮಗಳು’ ಎಂಬ ವಿಂಗಡಣೆ ಮಾಡುತ್ತವೆ. ಮಹತ್ವದ ಸಾಮಾಜಿಕ ಮಾಧ್ಯಮಗಳು,ಮುಖ್ಯ ಅನುಪಾಲನಾಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ದೂರು ನಿರ್ವಹಣೆ ಅಧಿಕಾರಿಗಳನ್ನು ನೇಮಿಸುವುದೂ ಸೇರಿದಂತೆ ಹೆಚ್ಚುವರಿಯಾಗಿ ಕೆಲವು ಕ್ರಮಗಳನ್ನು ಅನುಸರಿಸಬೇಕು. ಈ ಅಧಿಕಾರಿಗಳೂ ಭಾರತದಲ್ಲಿಯೇ ನೆಲೆಸಿರಬೇಕಾಗುತ್ತದೆ.

ಈ ನಿಯಮಗಳ ಬಗ್ಗೆ ಅಧ್ಯಯನ ನಡೆಸುವುದಾಗಿ ಫೇಸ್‌ಬುಕ್‌ನಂಥ ಸಂಸ್ಥೆಗಳು ಹೇಳಿವೆ. ದೂರು ನಿರ್ವಹಣೆ, ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯುವುದು, ಗ್ರಾಹಕರಿಗೆ ಆನ್‌ಲೈನ್‌ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ಹೊಸ ನಿಯಮಗಳು ಮಹತ್ವದ ಹೆಜ್ಜೆಗಳಾಗಿವೆ ಎಂದು ಕೆಲವರು ಹೇಳಿದ್ದಾರೆ.

ಆದರೆ, ಇನ್ನು ಕೆಲವು ಸಂಸ್ಥೆಗಳು, ‘ಈ ಕ್ರಮವು ಕಾರ್ಯಾಚರಣೆ ವೆಚ್ಚ ಹೆಚ್ಚಿಸುತ್ತದೆ. ಸಣ್ಣ ಸಂಸ್ಥೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಇದು ಪರಿಣಾಮ ಬೀರುತ್ತದೆ’ ಎಂದಿದ್ದಾರೆ.

‘ಹೊಸ ನಿಯಮಗಳು ಸಂಸ್ಥೆಗಳ ಮೇಲೆ ಅನಗತ್ಯ ಆರ್ಥಿಕ ಹೊರೆ ಹೊರಿಸುತ್ತವೆ. ಆರ್ಥಿಕವಾಗಿ ಬಲಿಷ್ಠವಾಗಿರುವ, ದೊಡ್ಡ ಸಂಸ್ಥೆಗಳು ಮಾತ್ರ ಉಳಿಯುವಂತೆ ಮಾಡುತ್ತವೆ’ ಎಂದು ಸಾಫ್ಟ್‌ವೇರ್‌ ಫ್ರೀಡಂ ಲಾ ಸೆಂಟರ್‌ (ಎಸ್‌ಎಫ್‌ಎಲ್‌ಸಿ) ಸಂಸ್ಥಾಪಕರಾದ ಮಿಷಿ ಚೌಧುರಿ ಹೇಳಿದ್ದಾರೆ.

‘ಸರ್ಕಾರ ಅಥವಾ ನ್ಯಾಯಾಲಯವು ಯಾವುದೇ ವಿಷಯವನ್ನು ‘ವಿವಾದಿತ’ ಎಂದು ಘೋಷಿಸಿದರೆ, ಅದನ್ನು 36 ಗಂಟೆಗಳೊಳಗೆ ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಬೇಕಾಗುತ್ತದೆ. ಆದರೆ, ಬಳಕೆದಾರರ ಖಾಸಗಿತನವನ್ನು ರಕ್ಷಿಸಲು ಬಯಸುವ ಕೆಲವು ಕಂಪನಿಗಳು ಈ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲವು ನಿಯಮಾವಳಿಗಳು ಅಸಂಬದ್ಧವಾಗಿ ಕಾಣಿಸುತ್ತಿದ್ದು, ಅವುಗಳ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಾಗಿದೆ ಎಂದು ಉದ್ದಿಮೆಯ ಹಲವರು ಹೇಳಿದ್ದಾರೆ.

‘ಜಗತ್ತಿನಲ್ಲಿ ತಂತ್ರಜ್ಞಾನ ಬಳಕೆಯ ವೇಗ ಅಧಿಕವಾಗಿದೆ. ಇಂಥ ಸ್ಥಿತಿಯಲ್ಲಿ ‘ನಿಯಂತ್ರಣ’ ಹಾಗೂ ‘ನಾವೀನ್ಯ’ದ ನಡುವೆ ಸಮತೋಲನ ಕಾಪಾಡುವುದು ಮುಖ್ಯ. ಜತೆಗೆ ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿಯುತ ಬಳಕೆಯೂ ಮುಖ್ಯ’ ಎಂದುನಾಸ್ಕಾಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT