ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್‌‌: ಕೆವೈಸಿ ಪೂರ್ಣಕ್ಕೆ ಗಡುವು ವಿಸ್ತರಣೆ

Published 1 ಫೆಬ್ರುವರಿ 2024, 16:34 IST
Last Updated 1 ಫೆಬ್ರುವರಿ 2024, 16:34 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್‌ ಖಾತೆಯಲ್ಲಿ ಹಣ ಹೊಂದಿದ್ದರೂ ಕೆವೈಸಿ ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲು ನೀಡಿದ್ದ ಗಡುವನ್ನು ಫೆಬ್ರುವರಿ 29ರ ವರೆಗೆ ವಿಸ್ತರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆದೇಶ ಉಲ್ಲಂಘಿಸಿ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್ಯಾಗ್‌‌ಗಳನ್ನು ಬಳಕೆ ಮಾಡಲಾಗುತ್ತಿತ್ತು. ಅಲ್ಲದೇ, ಕೆವೈಸಿ ಇಲ್ಲದೆಯೇ ಫಾಸ್ಟ್ಯಾಗ್‌‌ಗಳನ್ನು ನೀಡಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಪ್ರಾಧಿಕಾರವು ಈ ಕ್ರಮಕೈಗೊಂಡಿದೆ.

ದೇಶದಲ್ಲಿ ಕೆವೈಸಿ ಪೂರ್ಣಗೊಳಿಸದ 1.27 ಕೋಟಿ ಫಾಸ್ಟ್ಯಾಗ್‌ಗಳಿವೆ. ಜನವರಿ 31ರವರೆಗೆ ನೀಡಿದ್ದ ಗಡುವಿನೊಳಗೆ ಕೇವಲ 7 ಲಕ್ಷ ಕೆವೈಸಿಗಳಷ್ಟೇ ಪೂರ್ಣಗೊಂಡಿವೆ. ಹಾಗಾಗಿ, ಅವಧಿ ವಿಸ್ತರಿಸಲಾಗಿದೆ ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT