ಭಾನುವಾರ, ಜೂಲೈ 5, 2020
27 °C

2021 ಮಾರ್ಚ್ 31ರ ವರೆಗೆ ಟಿಡಿಎಸ್, ಟಿಸಿಎಸ್ ಶೇ.25ರಷ್ಟು ಕಡಿತ: ವಿತ್ತ ಸಚಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಘೋಷಿಸಿದ್ದ ₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ನ ವಿವರ ಹಂಚಿಕೊಂಡಿದ್ದಾರೆ.

 ಸುದ್ದಿಗೋಷ್ಠಿಯ ಮುಖ್ಯಾಂಶಗಳು

ವಿವಾದ್ ಸೇ ವಿಶ್ವಾಸ್ ಯೋಜನೆಯ ಅಂತಿಮ ದಿನಾಂಕ ಡಿಸೆಂಬರ್ 30ರವರೆಗೆ ವಿಸ್ತರಣೆ
 
ತೆರಿಗೆ ಲೆಕ್ಕಪರಿಶೋಧನೆಯ ಅಂತಿಮ ದಿನಾಂಕವನ್ನು 2020 ಸೆಪ್ಟೆಂಬರ್ 30ರಿಂದ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ.

ಐಟಿಆರ್ (ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್) ಸಲ್ಲಿಕೆಯ ಅಂತಿಮ ದಿನಾಂಕ ಜುಲೈ 31ರಿಂದ  ನವೆಂಬರ್ 31ಕ್ಕೆ ವಿಸ್ತರಿಸಲಾಗಿದೆ.

ಬಾಕಿ ಉಳಿದಿರುವ ಎಲ್ಲ ಪಾವತಿಗಳನ್ನು ಶೀಘ್ರದಲ್ಲೇ ನೀಡಲಾಗುವುದು.

ಟಿಡಿಎಸ್ ಇಳಿಕೆಯು 50,000 ಕೋಟಿಯ ಲಿಕ್ವಿಡಿಟಿಯನ್ನುಂಟು ಮಾಡುತ್ತದೆ.

ಎಲ್ಲದರಲ್ಲೂ ಟಿಡಿಎಸ್ ದರ ಕಡಿತವಾಗಲಿದೆ. ನಾಳೆಯಿಂದಲೇ ಇದು ಅನುಷ್ಠಾನಕ್ಕೆ ಬರಲಿದೆ.

2021 ಮಾರ್ಚ್ 31ರ ವರೆಗೆ ಟಿಡಿಎಸ್, ಟಿಸಿಎಸ್ ಶೇ.25ರಷ್ಟು ಕಡಿತ

ಎಲ್ಲ ಕೇಂದ್ರ ಸಂಸ್ಥೆಗಳು ನಿರ್ಮಾಣ ಹಂತದಲ್ಲಿರುವ ಕಾರ್ಯ ಮಾಡುವ ಮತ್ತು ಗೂಡ್ಸ್ ಮತ್ತು ಸೇವಾ ಗುತ್ತಿಗೆದಾರರಿಗೆ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಲು  6 ತಿಂಗಳು ಹೆಚ್ಚು ಅವಧಿ ನೀಡಬೇಕು.

ಕೋವಿಡ್‌ನ್ನು  ನೈಸರ್ಗಿಕ ವಿಪತ್ತು ಎಂದು ಪರಿಗಣಿಸಿ ರಿಯಲ್ ಎಸ್ಟೇಟ್ ಯೋಜನೆಗಳ ನಿರ್ವಹಣೆಯಲ್ಲಿ ಹೊಂದಿಕೊಳ್ಳುವಂತೆ ಮಾಡಲು ನಗರಾಭಿವೃದ್ಧಿ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಬೇಕು

₹ 45,000 ಕೋಟಿ ಲಿಕ್ವಿಡಿಟಿ ಇನ್ಫ್ಯೂಷನ್. ಮೊದಲ ಶೇ.20 ನಷ್ಟವನ್ನು ಭಾರತ ಸರ್ಕಾರ ಭರಿಸಲಿದೆ.

₹ 90,000 ಕೋಟಿ ಲಿಕ್ವಿಡಿಟಿ ಅನುದಾನವನ್ನು ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ (ಡಿಸ್ಕಾಂ)ಗಳಿಗೆ ನೀಡಲಾಗುವುದು.
 ಎನ್‌ಬಿಎಫ್‌ಸಿಗಳಿಗೆ ಭಾಗಶಃ ಕ್ರೆಡಿಟ್ ಗ್ಯಾರೆಂಟಿ ಯೋಜನೆ

 ₹ 30,000 ಕೋಟಿ ಲಿಕ್ವಿಡಿಟಿ ಯೋಜನೆಗಳನ್ನು ಸಾಲ ಪತ್ರದ ಮೂಲಕ ಎಚ್‌ಎಫ್‌ಸಿ ಮತ್ತು ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಗೆ ನೀಡಲಾಗುವುದು.

ಶಾಸನಬದ್ಧ ಇಪಿಎಫ್ ಕೊಡುಗೆಯನ್ನು ಕಡಿಮೆಯನ್ನು ಕಡಿಮೆ ಮಾಡುವುದರಿಂದ ಕೈಗೆ ಸಿಗುವ ವೇತನ ಜಾಸ್ತಿಯಾಗುತ್ತದೆ ಮತ್ತು ಲಿಕ್ವಿಡಿಟಿಯೂ ಹೆಚ್ಚುತ್ತದೆ.

ಸಿಪಿಎಸ್‌ಇಯು ಶೇ.12ರಲ್ಲಿ ಇಪಿಎಫ್‌ನ್ನು  ನಿರ್ವಹಣೆ ಮಾಡಲಿದೆ.

ಶಾಸನಬದ್ಧ  ಪಿಎಫ್ ಕೊಡುಗೆಯು ಮೂರು ತಿಂಗಳವರೆಗೆ ಶೇ.12ರಿಂದ 10ಕ್ಕೆ ಇಳಿಸಲಾಗುವುದು.
ಮುಂದಿನ 3 ತಿಂಗಳುಗಳ ಕಾಲ ಭಾರತ ಸರ್ಕಾರವು ಇಪಿಎಫ್ ಪಾವತಿ ಮಾಡಲಿದೆ. ಈ ಮೂಲಕ 72 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

ಎಲ್ಲ ಇಪಿಎಫ್ ವ್ಯವಹಾರಗಳಿಗೆ ಲಿಕ್ವಿಡಿಟಿ  ರಿಲೀಫ್ ನೀಡಲಾಗುವುದು. ಶೇ.12 ಕೊಡುಗೆಯನ್ನು ನೌಕರರು ನೀಡಬೇಕು ಮತ್ತು ನೌಕರಿ ನೀಡಿದವರು ಕೊಡುವ ಶೇ.12ಕೊಡುಗೆಯನ್ನು ಮುಂದಿನ 3 ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.

₹  200 ಕೋಟಿಗಳಷ್ಟು ಸರ್ಕಾರಿ ಖರೀದಿಗಳಲ್ಲಿ ಜಾಗತಿಕ ವ್ಯಾಪಾರಿಗಳಿಗೆ ಅನುಮತಿ ಇರುವುದಿಲ್ಲ. ಇದು ಭಾರತವನ್ನು ಸ್ವಾವಲಂಬಿ ಮಾಡುತ್ತದೆ. ಇದರಿಂದ ಮೇಕ್ ಇನ್ ಇಂಡಿಯಾ ಸಾಧನೆ ಮಾಡಬಹುದು.

ಕಿರು,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ₹3 ಲಕ್ಷ ಕೋಟಿ ಮೇಲಾಧಾರ ರಹಿತ ಸಾಲ

ಎಂಎಸ್‌ಎಂಇಯ ವ್ಯಾಖ್ಯಾನವೇ ಬದಲಾಗಿದೆ.
ಈಗ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳು ಚಿಂತಿಸುವುದು ಬೇಡ. ಅವುಗಳಿಗೆ ಎಂಎಸ್‌ಎಂಇ ಪ್ರಯೋಜನಗಳು ಸಿಗಲಿವೆ.

ಫಂಡ್‌ಗಳ ಫಂಡ್ ಮೂಲಕ  ಎಂಎಸ್‌ಎಂಇಗಳಿಗೆ ₹ 50,000 ಕೋಟಿ ಇಕ್ವಿಟಿ ಇನ್‌ಫ್ಯೂಶನ್ ಸಿಗಲಿದೆ. ಇದು ಮದರ್ ಫಂಡ್ ಮತ್ತು ಕೆಲವು ಡಾಟರ್ ಫಂಡ್‌ಗಳ ಮೂಲಕ ಕಾರ್ಯ ನಿರ್ವಹಿಸಲಿದೆ. ಇದು ಎಂಎಸ್‌ಎಂಇಗಳ ಗಾತ್ರ ಮತ್ತು ಸಾಮರ್ಥ್ಯ ವಿಸ್ತರಣೆಗೆ ಸಹಾಯವಾಗಲಿದೆ.

ಈ ಮೂಲಕ 45 ಲಕ್ಷ ಎಂಎಸ್‌ಎಂಇ ಘಟಕಗಳು ಮತ್ತೆ  ಚಟುವಟಿಕೆ ಆರಂಭಿಸುವಂತೆ ಮಾಡಲಾಗುವುದು. ಕೆಲಸವೂ ನಷ್ಟವಾಗುವುದಿಲ್ಲ.

ವಲಸೆ ಕಾರ್ಮಿಕರು ಬಿಕ್ಕಟ್ಟು ತೀವ್ರವಾಗಿ ಇರುವುದಿಂದ ಕಂಪನಿಗಳಿಗೆ ಮತ್ತು ವ್ಯವಹಾರಗಳಿಗೆ ಉತ್ತೇಜನ ನೀಡಲಾಗುವುದು. 

ಮನರೇಗಾ ಪಾವತಿ ಜಾಸ್ತಿ ಮಾಡುವ ಸಾಧ್ಯತೆ ಇದೆ.

ಸ್ವಾವಲಂಬಿ ಭಾರತದ ನಿರ್ಮಾಣ ಮತ್ತು ಅಭಿವದ್ಧಿಗಾಗಿ ಆತ್ಮನಿರ್ಭರ್ ಭಾರತ್ ಅಭಿಯಾನ್ ಆರಂಭ ಮಾಡಲಾಗಿದೆ. ಪ್ರಧಾನಿ ಮೋದಿಯವರು ಭಾರತವನ್ನು ಸ್ವಾವಲಂಬಿ ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಗಾಗಿ 6 ಪ್ರಮುಖ ಹೆಜ್ಜೆಗಳನ್ನು ಸ್ವೀಕರಿಸಲಾಗಿದೆ

ಇಪಿಎಫ್, ಸಣ್ಣ ವಲಯ ಕೈಗಾರಿಕೆ, ಎಂಎಫ್ಐಗಳು, ಡಿಸ್ಕಾಂಗಳು, ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಮತ್ತು ತೆರಿಗೆ ಕ್ರಮಗಳ ಬಗ್ಗೆ ನಿರ್ಮಲಾ ಮಾತನಾಡಿದ್ದಾರೆ.

₹ 18,000 ಕೋಟಿ ಆದಾಯ ತೆರಿಗೆ ಮರುಪಾವತಿ ಲಿಕ್ವಿಡಿಟಿಯನ್ನು ಉತ್ತೇಜಿಸಲಿದೆ.

ಇವತ್ತಿನಿಂದ ಮುಂದಿನ ಕೆಲವು ದಿನಗಳವರೆಗೆ ನಿನ್ನೆ ಪ್ರಧಾನಿಯವರು ಮುಂದಿರಿಸಿದ್ದ ಕನಸುಗಳ ಬಗ್ಗೆ ನಾನು ಮಾಹಿತಿಗಳನ್ನು ನೀಡಲಿದ್ದೇನೆ. 

ಸ್ವಾವಲಂಬಿ ಭಾರತ ಎಂದರೆ ಜಗತ್ತಿನಿಂದ ಬೇರೆಯಾಗಿ ಇರುವುದಲ್ಲ.

ಪ್ರಧಾನಿಯವರು ಸದಾ ಸುಧಾರಣೆ  ಬಗ್ಗೆ ಚಿಂತಿಸುತ್ತಾರೆ
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು