ಬುಧವಾರ, ಮೇ 12, 2021
26 °C

ಎನ್‌ಎಂಡಿಸಿ: ಪಾಲ್‌ವಂಚಾ ಘಟಕ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಉತ್ತಮ ಗುಣಮಟ್ಟದ ಮೃದು ಕಬ್ಬಿಣ ತಯಾರಿಕಾ ಘಟಕದ (ಎಸ್‌ಐಯು) ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ.

ಆಡಳಿತಾತ್ಮಕ ಕಾರಣಕ್ಕೆ ಘಟಕವನ್ನು ಮುಚ್ಚಲಾಗಿತ್ತು. ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಎಸ್‌. ಚೆರಿಯನ್‌ ಅವರು ದೀಪ ಬೆಳಗಿಸಿ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಐಟಿಸಿಗೆ ಲಾಭ

ಬೆಂಗಳೂರು: ವೈವಿಧ್ಯಮಯ ವಹಿವಾಟಿನಲ್ಲಿ ತೊಡಗಿರುವ ಐಟಿಸಿ ಸಮೂಹ 3ನೆ ತ್ರೈಮಾಸಿಕದಲ್ಲಿ ₹ 3,209 ಕೋಟಿ ನಿವ್ವಳ ಲಾಭ ಗಳಿಸಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಉತ್ತಮ ಸಾಧನೆ ಫಲವಾಗಿ ಲಾಭವು ಶೇ 4ರಷ್ಟು ಹೆಚ್ಚಾಗಿದೆ. ಒಟ್ಟಾರೆ ವರಮಾನವು ಶೇ 15ರಷ್ಟು ಹೆಚ್ಚಳಗೊಂಡು ₹ 11,340 ಕೋಟಿಗೆ ತಲುಪಿದೆ. 

ಟಿವಿಎಸ್‌ ಮೋಟರ್ಸ್‌ ಲಾಭದಲ್ಲಿ ಹೆಚ್ಚಳ

ಬೆಂಗಳೂರು: ಟಿವಿಎಸ್‌ ಮೋಟರ್ಸ್‌, ಮೂರನೇ ತ್ರೈಮಾಸಿಕದಲ್ಲಿ ₹ 178 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ₹ 154 ಕೋಟಿಗೆ ಹೋಲಿಸಿದರೆ ಈ ಬಾರಿಯ ಲಾಭ ಶೇ 15.57ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿನ ವರಮಾನವು
ಶೇ 26ರಷ್ಟು ಹೆಚ್ಚಳವಾಗಿ ₹ 4,664 ಕೋಟಿಗೆ ತಲುಪಿದೆ. ರಫ್ತು ಸೇರಿದಂತೆ ಸಂಸ್ಥೆಯ ದ್ಚಿಚಕ್ರ ವಾಹನಗಳ ಮಾರಾಟವು ಶೇ 19ರಷ್ಟು ಏರಿಕೆಯಾಗಿ 9.50 ಲಕ್ಷಕ್ಕೆ ತಲುಪಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು