ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಣದ ಅದಿರು ಉತ್ಪಾದನೆ ಶೇ 24ರಷ್ಟು ಹೆಚ್ಚಳ: ಎನ್‌ಎಂಡಿಸಿ

Last Updated 28 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ), 2021–22ನೇ ಹಣಕಾಸು ವರ್ಷದಲ್ಲಿ 4.21 ಕೋಟಿ ಟನ್‌ ಕಬ್ಬಿಣದ ಅದಿರು ಉತ್ಪಾದನೆ ಮಾಡಿದ್ದು, 4.05 ಕೋಟಿ ಟನ್‌ ಮಾರಾಟ ಮಾಡಿದೆ.

2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಶೇ 24 ರಷ್ಟು ಮತ್ತು ಮಾರಾಟದಲ್ಲಿ ಶೇ 22 ರಷ್ಟು ಬೆಳವಣಿಗೆ ಸಾಧ್ಯವಾಗಿದೆ ಎಂದು ಕಂಪನಿಯು ತಿಳಿಸಿದೆ.

2021–22ನೇ ಹಣಕಾಸು ವರ್ಷಕ್ಕೆ ಒಟ್ಟಾರೆ ವಹಿವಾಟು ₹ 25,882 ಕೋಟಿಗೆ ತಲುಪಿದೆ. 2020–21ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ವಹಿವಾಟಿನ ಮೊತ್ತವು ₹ 15,370 ಕೋಟಿ ಇತ್ತು ಎಂದು ಮಾಹಿತಿ ನೀಡಿದೆ. ತೆರಿಗೆ ನಂತದ ಲಾಭವು ₹ 6,253 ಕೋಟಿಯಿಂದ ₹ 9,398 ಕೋಟಿಗೆ ಏರಿಕೆ ಆಗಿದೆ ಎಂದು ತಿಳಿಸಿದೆ.

ಭಾರತವನ್ನು ‘ಆತ್ಮನಿರ್ಭರ ಭಾರತ’ ಮಾಡುವ ನಿಟ್ಟಿನಲ್ಲಿ ಕಂಪನಿಗೆ ಇರುವ ಬದ್ಧತೆಯನ್ನು ಈ ಹಣಕಾಸು ಸಾಧನೆಯು ಸೂಚಿಸುತ್ತಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮಿತ್‌ ದೇಬ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT