ಗುರುವಾರ , ಸೆಪ್ಟೆಂಬರ್ 23, 2021
26 °C

ಆಗಸ್ಟ್‌ನಲ್ಲಿ ದಾಖಲೆಯ ಉತ್ಪಾದನೆ, ಮಾರಾಟ: ಎನ್‌ಎಂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಬ್ಬಿಣದ ಅದಿರು ಉತ್ಪದನೆ ಮತ್ತು ಮಾರಾಟದಲ್ಲಿ ಆಗಸ್ಟ್‌ ತಿಂಗಳಿನಲ್ಲಿಯೂ ದಾಖಲೆ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ ತಿಳಿಸಿದೆ. ಆಗಸ್ಟ್‌ನಲ್ಲಿ 30.6 ಲಕ್ಷ ಟನ್‌ ಕಬ್ಬಿಣದ ಅದಿರು ಉತ್ಪಾದನೆ ಮಾಡಲಾಗಿದೆ. ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇಕಡ 89ರಷ್ಟು ಏರಿಕೆ ಆಗಿದೆ.

ಕಂಪನಿಯ ಆರು ದಶಕಗಳ ಇತಿಹಾಸದಲ್ಲಿನ ದಾಖಲೆಯ ಉತ್ಪಾದನೆ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಬ್ಬಿಣದ ಅದಿರು ಮಾರಾಟವು 17.9 ಲಕ್ಷ ಟನ್‌ಗಳಿಂದ 29.1 ಲಕ್ಷ ಟನ್‌ಗಳಿಗೆ, ಅಂದರೆ ಶೇ 63ರಷ್ಟು, ಏರಿಕೆ ಆಗಿದೆ ಎಂದು ಅದು ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಆಗಸ್ಟ್‌ವರೆಗೆ ಉತ್ಪಾದನೆಯು ಶೇ 44ರಷ್ಟು ಹಾಗೂ ಮಾರಾಟವು ಶೇ 45ರಷ್ಟು ಹೆಚ್ಚಾಗಿದೆ.

‘ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳುಗಳಲ್ಲಿ ನಮ್ಮ ಸಾಧನೆಯು ಉತ್ತೇಜನಕಾರಿ ಆಗಿದೆ. ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ವಿಶ್ವಾಸ ಹೆಚ್ಚಿಸಲಿದೆ’ ಎಂದು ಕಂಪನಿಯ ಸಿಎಂಡಿ ಸುಮಿತ್‌ ದೇಬ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು