ನವದೆಹಲಿ: ಕನಿಷ್ಠ ವೇತನ ನಿಗದಿಪಡಿಸುವುದರಲ್ಲಿ ವಿಳಂಬ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಕಾರ್ಮಿಕ ಸಚಿವಾಲಯ ಶನಿವಾರ ಸ್ಪಷ್ಟಪಡಿಸಿದೆ.

ಕನಿಷ್ಠ ವೇತನ ನಿಗದಿಗೆ ಶಿಫಾರಸು ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರವು ಪ್ರೊ. ಅಜಿತ್ ಮಿಶ್ರಾ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸಿದೆ. ಇದರ ಅವಧಿ ಮೂರು ವರ್ಷ.

‘ಸಮಿತಿ ರಚನೆಯ ಮಾಡಿರುವುದು ಸರ್ಕಾರವು ಕನಿಷ್ಠ ವೇತನ ನಿಗದಿಪಡಿಸುವಲ್ಲಿ ವಿಳಂಬಗೊಳಿಸುವ ಪ್ರಯತ್ನ ಎಂದು ಕೆಲವು ಮುದ್ರಣ ಮಾಧ್ಯಮಗಳು ಮತ್ತು ಸಂಬಂಧಪಟ್ಟವರಿಂದ ಅಭಿಪ್ರಾಯ ವ್ಯಕ್ತವಾಗಿರುವುದು ಗಮನಕ್ಕೆ ಬಂದಿದೆ. ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ತಜ್ಞರ ಗುಂಪು ತನ್ನ ಶಿಫಾರಸುಗಳನ್ನು ಆದಷ್ಟು ಬೇಗ ಸರ್ಕಾರಕ್ಕೆ ಸಲ್ಲಿಸಲಿದೆ’ ಎಂದು ಸಚಿವಾಲಯವು ತಿಳಿಸಿದೆ.

ಸಮಿತಿಯು ಜೂನ್ 14ರಂದು ಮೊದಲ ಸಭೆ ನಡೆಸಿದ್ದು, ಇದೇ ತಿಂಗಳ 29ರಂದು ಎರಡನೇ ಬಾರಿಗೆ ಸಭೆ ಸೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.