ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಿಂದ ಹೊರನಡೆಯುವ ಉದ್ದೇಶವಿಲ್ಲ: ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌

Last Updated 2 ಏಪ್ರಿಲ್ 2021, 9:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮಾರುಕಟ್ಟೆಯಿಂದ ಹೊರನಡೆಯುವ ಯಾವ ಉದ್ದೇಶವೂ ಇಲ್ಲ ಎಂದು ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ ಶುಕ್ರವಾರ ಹೇಳಿದೆ.

ಸಾಲಪತ್ರ ಆಧಾರಿತ ಆರು ಮ್ಯೂಚುವಲ್‌ ಫಂಡ್ ಯೋಜನೆಗಳಿಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ‘ಸೆಬಿ’ ತನ್ನ ವಾದವನ್ನು ನ್ಯಾಯಸಮ್ಮತವಾಗಿ ಆಲಿಸದೆ ಇದ್ದರೆ ಭಾರತದ ಮಾರುಕಟ್ಟೆಯಿಂದ ಹೊರನಡೆಯಬೇಕಾಗುತ್ತದೆ ಎಂದು ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಹೇಳಿದೆ ಎಂದು ವರದಿಯಾಗಿತ್ತು. ಈ ವರದಿಗೆ ಪ್ರತಿಕ್ರಿಯೆಯಾಗಿ ಕಂಪನಿಯು ಸ್ಪಷ್ಟನೆ ನೀಡಿದೆ.

‘ನಾವು ಭಾರತದಿಂದ ಹೊರನಡೆಯಲಿದ್ದೇವೆ ಎಂಬ ಮಾತುಗಳು ಸತ್ಯವಲ್ಲ’ ಎಂದು ಕಂಪನಿಯ ಅಧ್ಯಕ್ಷ ಸಂಜಯ್ ಸಪ್ರೆ ಹೂಡಿಕೆದಾರರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಭಾರತದ ಮ್ಯೂಚುವಲ್‌ ಫಂಡ್ ಮಾರುಕಟ್ಟೆಗೆ ಆರಂಭದ ದಿನಗಳಲ್ಲೇ ಪ್ರವೇಶಿಸಿದ ಕಂಪನಿಗಳ ಪೈಕಿ ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಕೂಡ ಒಂದು. ಜಾಗತಿಕ ಮಟ್ಟದ ಕೆಲವು ಆಸ್ತಿ ನಿರ್ವಹಣಾ ಕಂಪನಿಗಳು ಹೊರ ನಡೆದಾಗಲೂ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಕಂಪನಿಯು ಉದ್ಯಮದ ಭಾಗವಾಗಿ ಮುಂದುವರಿಯಲು ತೀರ್ಮಾನಿಸಿತು ಎಂದು ಅವರು ಪತ್ರದಲ್ಲಿ ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT