ಭಾನುವಾರ, ಜನವರಿ 19, 2020
20 °C

ಸಬ್ಸಿಡಿರಹಿತ ಎಲ್‌ಪಿಜಿ ಬೆಲೆ ಏರಿಕೆ: ಪ್ರತಿ ಸಿಲಿಂಡರ್‌ಗೆ ₹ 19 ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಬ್ಸಿಡಿರಹಿತ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹ 19ರಂತೆ ಹೆಚ್ಚಿಸಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.  14.2 ಕೆಜಿಯ ಪ್ರತಿ ಸಿಲಿಂಡರ್‌ನ ಬೆಲೆಯನ್ನು ಸತತ ಐದನೇ ತಿಂಗಳೂ ಹೆಚ್ಚಿಸಲಾಗಿದೆ. 2019ರ ಸೆಪ್ಟೆಂಬರ್‌ನಿಂದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದುವರೆಗೆ ₹ 139.50ರಂತೆ ಬೆಲೆ ಹೆಚ್ಚಳಗೊಂಡಿದೆ. ಬೆಂಗಳೂರಿನಲ್ಲಿನ ಬೆಲೆ ₹ 716ಕ್ಕೆ ತಲುಪಿದೆ. ಗ್ರಾಹಕರು ತಮ್ಮ ಪಾಲಿನ ವಾರ್ಷಿಕ ಸಬ್ಸಿಡಿಸಹಿತ 12 ಸಿಲಿಂಡರುಗಳ ಮಿತಿ ಕೊನೆಗೊಂಡ ನಂತರ ಸಬ್ಸಿಡಿರಹಿತ ಬೆಲೆಗೆ ಖರೀದಿಸಬೇಕಾಗುತ್ತದೆ.

ಸೀಮೆಎಣ್ಣೆ 26 ಪೈಸೆ ತುಟ್ಟಿ: ಸಾರ್ವಜನಿಕ ‍ಪಡಿತರ ವ್ಯವಸ್ಥೆ ಮೂಲಕ ವಿತರಿಸುವ ಸೀಮೆಎಣ್ಣೆ ದರವನ್ನು ಪ್ರತಿ ಲೀಟರ್‌ಗೆ 26 ಪೈಸೆಯಂತೆ ಹೆಚ್ಚಿಸಲಾಗಿದೆ.

ವಿಮಾನ ಇಂಧನ ಬೆಲೆ ಹೆಚ್ಚಳ: ವಿಮಾನ ಇಂಧನದ (ಎಟಿಎಫ್‌) ಬೆಲೆಯನ್ನು ಪ್ರತಿ ಕಿಲೊ ಲೀಟರ್‌ಗೆ ₹ 1,637.25ರಂತೆ (₹ 64,323.76) ಹೆಚ್ಚಿಸಲಾಗಿದೆ.

ಸತತ ಎರಡನೇ ತಿಂಗಳೂ ‘ಎಟಿಎಫ್‌’ ದರ ಹೆಚ್ಚಿಸಿರುವುದರಿಂದ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿರುವ ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು