ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಪಿಎಸ್‌ನಿಂದ ಅಧಿಕ ಲಾಭಾಂಶ’

Last Updated 6 ಡಿಸೆಂಬರ್ 2021, 11:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹನ್ನೆರಡು ವರ್ಷಗಳ ಅವಧಿಯಲ್ಲಿ ಎನ್‌ಪಿಎಸ್‌ನ (ರಾಷ್ಟ್ರೀಯ ಪಿಂಚಣಿ ಯೋಜನೆ) ಈಕ್ವಿಟಿ ಯೋಜನೆಗಳಲ್ಲಿ ಮಾಡಿರುವ ಹೂಡಿಕೆಗಳು ವಾರ್ಷಿಕ ಶೇಕಡ 12ರಷ್ಟಕ್ಕಿಂತ ಹೆಚ್ಚು ಲಾಭಾಂಶ ತಂದುಕೊಟ್ಟಿವೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್‌ಡಿಎ) ಅಧ್ಯಕ್ಷ ಸುಪ್ರತಿಮ್ ವಂದ್ಯೋಪಾಧ್ಯಾಯ ಹೇಳಿದ್ದಾರೆ.

ಸರ್ಕಾರಿ ಸಾಲ‍ಪತ್ರಗಳಲ್ಲಿನ ಹೂಡಿಕೆ ಯೋಜನೆಯು ಸರಿಸುಮಾರು ಶೇ 9.9ರಷ್ಟು, ಕಾರ್ಪೊರೇಟ್‌ ಬಾಂಡ್‌ಗಳಲ್ಲಿನ ಹೂಡಿಕೆ ಯೋಜನೆಯು ಶೇ 9.59ರಷ್ಟು ಲಾಭಾಂಶ ತಂದುಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಸಿಐಐ ಆಯೋಜಿಸಿದ್ದ ವಿಮೆ ಮತ್ತು ಪಿಂಚಣಿ ಶೃಂಗದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಭಾರತದಲ್ಲಿ ಪಿಂಚಣಿ ಲಭ್ಯತೆಯನ್ನು ಹೆಚ್ಚಿಸಲು ಇನ್ನಷ್ಟು ಉಪಕ್ರಮಗಳ ಅಗತ್ಯ ಇದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (ಐಅರ್‌ಡಿಎಐ), ಪಿಎಫ್‌ಆರ್‌ಡಿಎ ಮತ್ತು ಸಿಐಐ ಜೊತೆಯಾಗಿ ಪಿಂಚಣಿ ವಿಚಾರವಾಗಿ ಜಾಗೃತಿ ಮೂಡಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT