ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಕಾದ ಪ್ರಮುಖ ಐವರು ಅಧಿಕಾರಿಗಳು ರಾಜೀನಾಮೆ: ಇದೆಲ್ಲಾ ಸಾಮಾನ್ಯ ಎಂದ ಕಂಪನಿ

ಸೂಪರ್‌ ಸ್ಟೋರ್‌ ಸಿಇಒ, ವ್ಯವಹಾರಗಳ ಮುಖ್ಯಾಧಿಕಾರಿ, ಮುಖ್ಯ ವಾಣಿಜ್ಯ ಅಧಿಕಾರಿ ಸೇರಿ ಒಟ್ಟು ಪ್ರಮುಖ ಐವರು ಕಂಪನಿಯಿಂದ ಹೊರ ನಡೆದಿದ್ದಾರೆ.
Last Updated 24 ಮಾರ್ಚ್ 2023, 16:01 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಪ್ರಮುಖ ಸೌಂದರ್ಯ ಮತ್ತು ಫ್ಯಾಷನ್‌ ಇ–ಕಾಮರ್ಸ್‌ ಕಂಪನಿ ನೈಕಾದ ಪ್ರಮುಖ ಐವರು ರಾಜೀನಾಮೆ ನೀಡಿದ್ದಾರೆ ಎಂದು ಈ ಬಗ್ಗೆ ಗೊತ್ತಿರುವವರಿಂದ ಮಾಹಿತಿ ಲಭಿಸಿದೆ.

ಸೂಪರ್‌ ಸ್ಟೋರ್‌ ಸಿಇಒ, ವ್ಯವಹಾರಗಳ ಮುಖ್ಯಾಧಿಕಾರಿ, ಮುಖ್ಯ ವಾಣಿಜ್ಯ ಅಧಿಕಾರಿ ಸೇರಿ ಒಟ್ಟು ಪ್ರಮುಖ ಐವರು ಕಂಪನಿಯಿಂದ ಹೊರ ನಡೆದಿದ್ದಾರೆ.

ನೈಕಾದ ಸೂಪರ್‌ ಸ್ಟೋರ್‌ ಸಿಇಒ ವಿಕಾಸ್‌ ಗುಪ್ತಾ, ನೈಕಾ ಫ್ಯಾಶನ್‌ನ ವ್ಯವಹಾರಗಳ ಮುಖ್ಯಾಧಿಕಾರಿ ಗೋಪಾಲ್‌ ಆಸ್ತಾನ, ಮುಖ್ಯ ವಾಣಿಜ್ಯ ವ್ಯವಹಾರಗಳ ಅಧಿಕಾರಿ ಮನೋಜ್‌ ಗಾಂಧಿ, ವ್ಯವಹಾರಗಳ ಮುಖ್ಯಸ್ಥ ಸುಚಿ ಪಾಂಡ್ಯ, ಹಣಕಾಸು ಮುಖ್ಯಸ್ಥ ಲಲಿತ್‌ ಪೃಥ್ವಿ ರಾಜೀನಾಮೆ ನೀಡಿದ್ದಾರೆ.

ಇವರ ರಾಜೀನಾಮೆಗೆ ಕಾರಣ ಏನು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಏತನ್ಮಧ್ಯೆ ಪೃಥ್ವಿ ಎಜ್ಯುಟೆಕ್‌ ಕಂಪನಿ UNIVOದ ಮುಖ್ಯ ಹಣಕಾಸು ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇವು ಸ್ವಯಂಪ್ರೇರಿತ ಮತ್ತು ಅನೈಚ್ಛಿಕ ನಿರ್ಗಮನಗಳು ಎಂದು ಕಂಪನಿ ಹೇಳಿದೆ. 3,000 ದಷ್ಟು ಉದ್ಯೋಗಿಗಳು ಇರುವ ಕಂಪನಿಯಲ್ಲಿ ಇದೆಲ್ಲಾ ಸಾಮಾನ್ಯ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT