ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 96ರಷ್ಟು ಮೌಲ್ಯ ಹೆಚ್ಚಿಸಿಕೊಂಡ ನೈಕಾ

Last Updated 10 ನವೆಂಬರ್ 2021, 14:11 IST
ಅಕ್ಷರ ಗಾತ್ರ

ನವದೆಹಲಿ: ಸೌಂದರ್ಯವರ್ಧಕ ಸಾಧನಗಳ ಆನ್‌ಲೈನ್‌ ಮಾರುಕಟ್ಟೆಯಾದ ನೈಕಾ ಕಂಪನಿಯ ಷೇರುಗಳು ಬುಧವಾರ ಷೇರು ಮಾರುಕಟ್ಟೆ ಪ್ರವೇಶಿಸಿದ್ದು, ಐಪಿಒ ಸಂದರ್ಭದಲ್ಲಿ ನಿಗದಿ ಮಾಡಿದ್ದ ಬೆಲೆಗಿಂತ ಶೇಕಡ 96ರಷ್ಟು ಮೌಲ್ಯವನ್ನು ಒಂದೇ ದಿನದಲ್ಲಿ ಹೆಚ್ಚಿಸಿಕೊಂಡಿವೆ.

ಕಂಪನಿಯ ಷೇರು, ಷೇರು ಮಾರುಕಟ್ಟೆಯಲ್ಲಿ ಬುಧವಾರ ಬೆಳಿಗ್ಗೆ ₹ 2,001ರಂತೆ ವಹಿವಾಟು ಆರಂಭಿಸಿತು. ಈ ಮೂಲಕ ಷೇರುಗಳ ಮೌಲ್ಯವು ಐಪಿಒ ಸಂದರ್ಭದ ಬೆಲೆಗಿಂತ ಶೇಕಡ 77ರಷ್ಟು ಹೆಚ್ಚು ಮೌಲ್ಯವನ್ನುಆರಂಭದಲ್ಲಿಯೇ ಪಡೆದುಕೊಂಡವು. ನಂತರ ಒಂದು ಹಂತದಲ್ಲಿ ಷೇರು ಮೌಲ್ಯವು ಶೇ 99.83ರವರೆಗೂ ಹೆಚ್ಚಳ ಕಂಡಿತ್ತು.

ಮುಂಬೈ ಷೇರು ಮಾರುಕಟ್ಟೆಯಲ್ಲಿ (ಬಿಎಸ್‌ಇ) ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ಮೊದಲ ದಿನವೇ ₹ 1 ಲಕ್ಷ ಕೋಟಿಯ ಗಡಿಯನ್ನು ದಾಟಿದೆ. ಈಗ ಈ ಕಂಪನಿಯ ಮಾರುಕಟ್ಟೆ ಮೌಲ್ಯ ₹ 1.04 ಲಕ್ಷ ಕೋಟಿ ಆಗಿದೆ. ಐ‍ಪಿಒ ಮೂಲಕ ಕಂಪನಿಯ ಷೇರುಗಳನ್ನು ಖರೀದಿಸಿದ್ದವರ ಹೂಡಿಕೆಯು ಬುಧವಾರದ ವಹಿವಾಟಿನಲ್ಲಿ ಸರಿಸುಮಾರು ದುಪ್ಪಟ್ಟು ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT