ಭಾನುವಾರ, ಏಪ್ರಿಲ್ 5, 2020
19 °C

ಇಳಿಯಲಿದೆ ತೈಲ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ / ನವದೆಹಲಿ (ರಾಯಿಟರ್ಸ್‌): ಜಾಗತಿಕ ತೈಲ ಬೇಡಿಕೆ ಏಪ್ರಿಲ್‌ನಲ್ಲಿ ದಿನಕ್ಕೆ 1.87 ಕೋಟಿ ಬ್ಯಾರಲ್‌ಗಳಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ಹೇಳಿದೆ.

ಮಾರ್ಚ್‌ನಲ್ಲಿ ದಿನಕ್ಕೆ 1.05 ಕೋಟಿ ಬ್ಯಾರಲ್‌ಗಳಷ್ಟು ಇಳಿಕೆ ಕಂಡಿತ್ತು. ಒಟ್ಟಾರೆ ವಾರ್ಷಿಕ ಬೇಡಿಕೆಯಲ್ಲಿ 42.5 ಲಕ್ಷ ಬ್ಯಾರಲ್‌ಗಳಷ್ಟು ಕಡಿಮೆಯಾ ಯಾಗುವ ಸಾಧ್ಯತೆ ಇದೆ ಎಂದೂ ಅಂದಾಜು ಮಾಡಿದೆ. ಜಾಗತಿಕ ತೈಲ ಬೇಡಿಕೆಯಲ್ಲಿ ಏಷ್ಯಾದ ಪಾಲು ಶೇ 60ರಷ್ಟಿದೆ. ಆದರೆ, ಏಷ್ಯಾದಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದು, ತೈಲ ಸಂಸ್ಕರಣಾ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಪ್ರತಿ ಬ್ಯಾರಲ್‌ಗೆ ₹ 150ರಂತೆ ನಷ್ಟವಾಗುತ್ತಿದೆ. ಗ್ಯಾಸೋಲಿನ್‌ ತಯಾರಿಕೆಯಲ್ಲಿ ಪ್ರತಿ ಬ್ಯಾರಲ್‌ಗೆ ₹450ರಂತೆ ನಷ್ಟವಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು