ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಶೇ 10ರಷ್ಟು ಇಳಿಕೆ ಸಂಭವ?

Published 29 ಡಿಸೆಂಬರ್ 2023, 15:40 IST
Last Updated 29 ಡಿಸೆಂಬರ್ 2023, 15:40 IST
ಅಕ್ಷರ ಗಾತ್ರ

ಲಂಡನ್‌: ಪ್ರಸಕ್ತ ವರ್ಷದ ಕೊನೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರವು ಶೇ 10ರಷ್ಟು ಇಳಿಕೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟು, ಉತ್ಪಾದನಾ ಮಟ್ಟ ಕಡಿತ, ಹಣದುಬ್ಬರ ಏರಿಕೆಗೆ ಕೇಂದ್ರ ಬ್ಯಾಂಕ್‌ಗಳು ಕೈಗೊಂಡಿರುವ ಕ್ರಮಗಳಿಂದಾಗಿ ಎರಡು ವರ್ಷದ ಬಳಿಕ ದರ ಕಡಿಮೆಯಾಬಹುದು ಎಂದು ಮೂಲಗಳು ತಿಳಿಸಿವೆ.

ಕೆಂಪು ಸಮುದ್ರ ಮಾರ್ಗದಲ್ಲಿ ಕಚ್ಚಾ ತೈಲ ಹೊತ್ತ ಹಡಗುಗಳ ಮೇಲೆ ಯೆಮನ್‌ನ ಹೌತಿ ಉಗ್ರರು ದಾಳಿ ನಡೆಸಿದ್ದರು. ಇದರಿಂದ ಈ ಮಾರ್ಗದಲ್ಲಿ ತೈಲ ಸಾಗಾಟಕ್ಕೆ ತೊಡಕು ಎದುರಾಗಿತ್ತು. ಹಾಗಾಗಿ, ತೈಲದ ಬೆಲೆ ಏರಿಕೆಯಾಗಿತ್ತು. ಈಗ ಉಗ್ರರ ದಾಳಿ ನಿಯಂತ್ರಣಕ್ಕೆ ಬಂದಿದೆ. ಇದರಿಂದ ಮತ್ತೆ ಈ ಮಾರ್ಗದಲ್ಲಿ ಸಾಗಾಟ ಪುನರಾರಂಭಗೊಂಡಿದ್ದು, ಶುಕ್ರವಾರ ತೈಲ ಬೆಲೆ ಶೇ 3ರಷ್ಟು ಇಳಿಕೆಯಾಗಿದೆ.

ಬ್ರೆಂಟ್ ಕಚ್ಚಾ ತೈಲ ದರವು ಬ್ಯಾರಲ್‌ಗೆ ಶೇ 0.8ರಷ್ಟು ಏರಿಕೆ ಕಂಡು, 77.73 ಡಾಲರ್‌ಗೆ ತಲುಪಿದೆ. ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರವು ಶೇ 0.6ರಷ್ಟು ಏರಿಕೆಯಾಗಿ, ಬ್ಯಾರಲ್‌ಗೆ 72.19 ಡಾಲರ್‌ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT