ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ ತ್ರೈಮಾಸಿಕ: ಒಎನ್‌ಜಿಸಿ ನಿವ್ವಳ ಲಾಭ ₹ 8,764 ಕೋಟಿಗೆ ಏರಿಕೆ

Last Updated 12 ಫೆಬ್ರುವರಿ 2022, 10:33 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 8,764 ಕೋಟಿಗಳಷ್ಟಾಗಿದೆ.

ಹಿಂದಿನ ಹಣಕಾಸು ವರ್ಷ ಇದೇ ಅವಧಿಯಲ್ಲಿ ಇದ್ದ ₹1,258 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 596.7ರಷ್ಟು ಏರಿಕೆ ಆಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತೈಲ ಮತ್ತು ಅನಿಲ ದರಗಳಲ್ಲಿ ಆಗಿರುವ ಹೆಚ್ಚಳವನ್ನು ಉತ್ಪಾದನೆಯಲ್ಲಿ ಆಗಿರುವ ಕುಸಿತದೊಂದಿಗೆ ಸರಿದೂಗಿಸಿದ ಬಳಿಕ ಈ ಪ್ರಮಾಣದ ಲಾಭ ಆಗಿದೆ ಎಂದು ಕಂಪನಿಯು ಹೇಳಿದೆ.

ಕಂಪನಿಯ ವರಮಾನ ಶೇ 67.3ರಷ್ಟು ಹೆಚ್ಚಾಗಿದ್ದು ₹ 28,474 ಕೋಟಿಗಳಿಗೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಭತ್ತು ತಿಂಗಳುಗಳಲ್ಲಿ ನಿವ್ವಳ ಲಾಭವು ₹ 4,512 ಕೋಟಿಗಳಿಂದ ₹ 31,446 ಕೋಟಿಗಳಿಗೆ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ವರಮಾನವು ಶೇ 61.5ರಷ್ಟು ಹೆಚ್ಚಾಗಿ ₹ 75,849 ಕೋಟಿಗಳಿಗೆ ತಲುಪಿದೆ.

ಪ್ರತಿ ಷೇರಿಗೆ ₹ 1.75ರಷ್ಟು ಎರಡನೇ ಮಧ್ಯಂತರ ಲಾಭಾಂಶ ನೀಡಲು ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಕಂಪನಿಯು ಹೇಳಿದೆ. ಮೊದಲ ಮಧ್ಯಂತರ ಲಾಭಾಂಶವಾಗಿ ಪ್ರತಿ ಷೇರಿಗೆ ₹ 5.50 ರಷ್ಟು ನೀಡುವುದಾಗಿ ಕಂಪನಿಯು 2021ರ ನವೆಂಬರ್‌ನಲ್ಲಿ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT