ಭಾನುವಾರ, ಸೆಪ್ಟೆಂಬರ್ 19, 2021
24 °C

ಒಎನ್‌ಜಿಸಿ ನಿವ್ವಳ ಲಾಭ ₹ 4,335 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 4,335 ಕೋಟಿ ನಿವ್ವಳ ಲಾಭ ಗಳಿಸಿದೆ.

ಲಾಕ್‌ಡೌನ್‌ ಕಾರಣದಿಂದಾಗಿ ಬೇಡಿಕೆ ಮತ್ತು ಬೆಲೆಯು ಕುಸಿತ ಕಂಡಿತ್ತು. ಹೀಗಾಗಿ ‌ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 497 ಕೋಟಿ ಲಾಭ ಆಗಿತ್ತು. ಇದಕ್ಕೆ ಹೋಲಿಸಿದರೆ ನಿವ್ವಳ ಲಾಭವು ಶೇ 772.2ರಷ್ಟು ಹೆಚ್ಚಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಸರಾಸರಿ ವರಮಾನವು ಶೇ 77ರಷ್ಟು ಹೆಚ್ಚಾಗಿದು ₹ 23,022 ಕೋಟಿಗೆ ಏರಿಕೆ ಆಗಿದೆ.

ತೈಲ ಬೆಲೆಯು ಆಗಿರುವ ಎರಡು ಪಟ್ಟು ಹೆಚ್ಚಳವನ್ನು ಉತ್ಪಾದನಾ ಕುಸಿತದೊಂದಿಗೆ ಹೊಂದಿಸಲಾಗಿದೆ ಎಂದು ಅದು ತಿಳಿಸಿದೆ. ತ್ರೈಮಾಸಿಕದಲ್ಲಿ ಕಚ್ಚಾ ತೈಲ ಉತ್ಪಾದನೆಯು ಶೇ 5ರಷ್ಟು ಕಡಿಮೆ ಆಗಿದೆ. ನೈಸರ್ಗಿಕ ಅನಿಲ ಉತ್ಪಾದನೆ ಶೇ 4.3ರಷ್ಟು ಇಳಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು