ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚು ಕಡಿಮೆ ಮಾಡಿಸಿದ ಕೋವಿಡ್: ಸಮೀಕ್ಷೆ

Last Updated 25 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್–19 ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದರ ಕಾರಣದಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳುವುದು ಮತ್ತು ಉದ್ಯೋಗ ಸೃಷ್ಟಿ ಮೊದಲಿನಂತೆ ಆಗುವುದು ಅನಿಶ್ಚಿತವಾಗಿದೆ. ಇದರಿಂದಾಗಿ, ಮುಂದಿನ ದಿನಗಳಲ್ಲಿ ಖರ್ಚುಗಳನ್ನು ಬಹಳ ಎಚ್ಚರಿಕೆಯಿಂದ ಮಾಡುವುದಾಗಿಪ್ರತಿ ಹತ್ತರಲ್ಲಿ ಒಂಬತ್ತು ಮಂದಿ ಭಾರತೀಯರು ಹೇಳಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಬ್ರಿಟನ್ ಮೂಲದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ನಡೆಸಿದ ಸಮೀಕ್ಷೆಯ ಅನ್ವಯ, ‘ಕೋವಿಡ್–19 ಸಾಂಕ್ರಾಮಿಕವು ನಾವು ನಮ್ಮ ಖರ್ಚುಗಳನ್ನು ಬಹಳ ಎಚ್ಚರಿಕೆಯಿಂದ ಮಾಡುವಂತಹ ಸ್ಥಿತಿ ಸೃಷ್ಟಿಸಿದೆ’ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಭಾರತೀಯರಲ್ಲಿ ಶೇಕಡ 90ರಷ್ಟು ಮಂದಿ ಹೇಳಿದ್ದಾರೆ. ಆದರೆ, ಜಾಗತಿಕ ಮಟ್ಟದಲ್ಲಿ ಈ ಅಭಿಪ್ರಾಯ ಹೊಂದಿರುವವರ ಪ್ರಮಾಣ ಶೇಕಡ 75ರಷ್ಟು ಮಾತ್ರ.ತಾವು ಯಾವುದಕ್ಕೆಲ್ಲ ಹಣ ಖರ್ಚು ಮಾಡುತ್ತಿದ್ದೇವೆ ಎಂಬುದರ ಮೇಲೆ ನಿಗಾ ಇಡುವುದಾಗಿ ಶೇ 76ರಷ್ಟು ಭಾರತೀಯರು ಹೇಳಿದ್ದಾರೆ.

ಈ ಪ್ರಮಾಣ ಜಾಗತಿಕವಾಗಿ ಶೇ 62ರಷ್ಟು ಇದೆ. ಭಾರತದಲ್ಲಿ ಮತ್ತು ಇತರೆಡೆ ಜನ ಈಗ ದಿನಸಿ ಹಾಗೂ ಆರೋಗ್ಯ ಸಂಬಂಧಿ ಖರ್ಚು ಮಾಡುವುದು ಹೆಚ್ಚಾಗಿದೆ. ಹಾಗೆಯೇ, ಅವರು ಕೆಲವು ಡಿಜಿಟಲ್ ಸಾಧನಗಳ ಮೇಲೆಯೂ ಹಣ ವಿನಿಯೋಗಿಸುತ್ತಿದ್ದಾರೆ.

ಅಂಕಿ–ಅಂಶಗಳು

64%: ಪ್ರವಾಸದ ಖರ್ಚು ಕಡಿಮೆ ಮಾಡಿದ ಭಾರತೀಯರ ಪ್ರಮಾಣ

56%: ಬಟ್ಟೆ ಖರೀದಿ ಕಡಿಮೆ ಮಾಡಿದವರು

72%: ಖರೀದಿಯನ್ನು ಸ್ಥಳೀಯವಾಗಿ ಮಾಡುತ್ತೇವೆ ಎಂದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT