ಮಂಗಳವಾರ, ಆಗಸ್ಟ್ 3, 2021
26 °C

ಪ್ರಯಾಣಿಕರ ವಾಹನ ಮಾರಾಟ: ದಾಖಲೆ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷದ ಮೇನಲ್ಲಿ ಕೇವಲ 30,749 ಪ್ರಯಾಣಿಕರ ವಾಹನಗಳು (ಪಿವಿ) ಮಾರಾಟಗೊಂಡಿವೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ 2,35,933 ವಾಹನಗಳ ಮಾರಾಟಕ್ಕೆ ಹೋಲಿಸಿದರೆ, ಈ ಬಾರಿ ಶೇ 86.97ರಷ್ಟು ಕುಸಿತ ದಾಖಲಾಗಿದೆ ಎಂದು ಅಟೊಮೊಬೈಲ್‌ ಡೀಲರ್ಸ್‌ ಸಂಘದ ಒಕ್ಕೂಟವು (ಎಫ್‌ಎಡಿಎ) ತಿಳಿಸಿದೆ.

ದೇಶದಾದ್ಯಂತ ಇರುವ 1,435 ಪ್ರಾದೇಶಿಕ ಸಾರಿಗೆ ಕಚೇರಿಗಳ ಪೈಕಿ 1,225 ಕಚೇರಿಗಳಲ್ಲಿ ನಡೆದ ವಾಹನಗಳ ನೋಂದಣಿ ಲೆಕ್ಕಕ್ಕೆ ತೆಗೆದುಕೊಂಡಿರುವ ಒಕ್ಕೂಟವು ಈ ವಿವರ ನೀಡಿದೆ.

ದ್ವಿಚಕ್ರ ವಾಹನಗಳ ಮಾರಾಟವೂ ಶೇ 88.80ರಷ್ಟು ಇಳಿಕೆಯಾಗಿದೆ. 2019ರಲ್ಲಿ 14,19,842 ಬೈಕ್‌ಗಳು ಮಾರಾಟವಾಗಿದ್ದವು. ಈ ವರ್ಷದ ಮೇನಲ್ಲಿ 1,59,039 ಬೈಕ್‌ಗಳು ಮಾರಾಟವಾಗಿವೆ.

ಎಲ್ಲ ಬಗೆಯ ವಾಹನಗಳ ಒಟ್ಟಾರೆ ಮಾರಾಟವು  ವರ್ಷದ ಹಿಂದಿನ 18.21 ಲಕ್ಷಕ್ಕೆ ಹೋಲಿಸಿದರೆ, ಈ ಬಾರಿ 2.02 ಲಕ್ಷ ವಾಹನ ಮಾರಾಟಗೊಂಡಿವೆ. ಶೇ 88.87ರಷ್ಟು ಇಳಿಕೆ ಕಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು