ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟ ಜನವರಿಯಲ್ಲಿ ಶೇಕಡ 11.14ರಷ್ಟು ಏರಿಕೆಯಾಗಿ 2.76 ಲಕ್ಷಕ್ಕೆ ತಲುಪಿದೆ. 2020ರ ಜನವರಿಯಲ್ಲಿ 2.48 ಲಕ್ಷ ವಾಹನಗಳು ಮಾರಾಟವಾಗಿದ್ದವು.

ಪೂರೈಕೆ ವ್ಯವಸ್ಥೆಯಲ್ಲಿನ ಸವಾಲುಗಳು, ಸೆಮಿಕಂಡಕ್ಟರ್ ಕೊರತೆ ಮತ್ತು ಕಂಟೈನರ್ ಶುಲ್ಕ ಗರಿಷ್ಠ ಮಟ್ಟದಲ್ಲಿ ಇದ್ದರೂ ಸಹ ಈ ಪ್ರಮಾಣದ ಪ್ರಗತಿ ಸಾಧ್ಯವಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್ಐಎಎಂ) ಹೇಳಿದೆ.

ದ್ವಿಚಕ್ರ ವಾಹನಗಳ ಮಾರಾಟ ಶೇ 6.63ರಷ್ಟು ಏರಿಕೆಯಾಗಿದೆ. ಮೋಟರ್ ಸೈಕಲ್ ಮಾರಾಟ ಶೇ 5.1ರಷ್ಟು, ಸ್ಕೂಟರ್ ಮಾರಾಟ ಶೇ 9ರಷ್ಟು ಏರಿಕೆಯಾಗಿದೆ. ತ್ರಿಚಕ್ರ ವಾಹನ ಮಾರಾಟ ಶೇ 56.76ರಷ್ಟು ಇಳಿಕೆಯಾಗಿದೆ. ಎಲ್ಲಾ ಮಾದರಿಗಳ ಒಟ್ಟಾರೆ ಮಾರಾಟ ಶೇ 4.97ರಷ್ಟು ಹೆಚ್ಚಾಗಿದೆ.

‘ಉಕ್ಕಿನ ಬೆಲೆ ಏರಿಕೆ, ಸೆಮಿಕಂಡಕ್ಟರ್ಗಳ ಕೊರತೆ ಮತ್ತು ಹೆಚ್ಚಿನ ಕಂಟೇನರ್ ಶುಲ್ಕಗಳು ಹಾಗೂ ಪೂರೈಕೆ ವ್ಯವಸ್ಥೆಯ ಸವಾಲುಗಳು ಉದ್ಯಮದ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿವೆ’ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್ ಮೆನನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.