ಭಾನುವಾರ, ಆಗಸ್ಟ್ 1, 2021
27 °C
ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ನೀಡಿರುವ ಮಾಹಿತಿ

ಪ್ರಯಾಣಿಕ ವಾಹನ ಮಾರಾಟ ಶೇ 78ರಷ್ಟು ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ವಾಹನ ಉದ್ದಿಮೆ-ಪ್ರಾತಿನಿಧಿಕ ಚಿತ್ರ

ನವದೆಹಲಿ: ದೇಶದ ಪ್ರಯಾಣಿಕ ವಾಹನಗಳ ಮಾರಾಟವು ಸತತ 9ನೇ ತಿಂಗಳಿನಲ್ಲಿಯೂ ಕುಸಿತ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟವು (ಎಸ್‌ಐಎಎಂ) ಮಾಹಿತಿ ನೀಡಿದೆ.

ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 78.43ರಷ್ಟು ಕುಸಿತ ಕಂಡಿದೆ.

20 ವರ್ಷಗಳ ಹಿಂದೆ ಪ್ರಯಾಣಿಕ ವಾಹನ ಮಾರಾಟ ಸತತ 5 ತ್ರೈಮಾಸಿಕಗಳಲ್ಲಿ ಕುಸಿತ ಕಂಡಿತ್ತು. 2000–01 ಮತ್ತು 2001–02 ಹಾಗೂ  2013–14 ಮತ್ತು 2014–15ರಲ್ಲಿ ಮಾರಾಟ ಇಳಿಕೆ ಕಂಡಿತ್ತು.

ವಾಣಿಜ್ಯ ವಾಹನಗಳ ಮಾರಾಟ 2.08 ಲಕ್ಷದಿಂದ 31,636 ಗಳಿಗೆ ಇಳಿಕೆ ಕಂಡಿದೆ. ಈ ಹಿಂದೆ 2013–14 ಮತ್ತು 2014–15ರಲ್ಲಿ 8 ತ್ರೈಮಾಸಿಕಗಳಲ್ಲಿ ಇಳಿಕೆಯಾಗಿತ್ತು.

‘ಕೋವಿಡ್‌ನಿಂದಾಗಿ ನಾವು ಸದ್ಯ ಕಷ್ಟದ ಪರಿಸ್ಥಿತಿಯಲ್ಲಿ ಸಾಗುತ್ತಿದ್ದೇವೆ. ಕಳೆದ ವರ್ಷದಿಂದ ಬೇಡಿಕೆ ಇಳಿಮುಖವಾಗಿದೆ. ಆದರೆ ಈ ತ್ರೈಮಾಸಿಕದಲ್ಲಿ ಕೋವಿಡ್‌ನಿಂದಾಗಿ ಬೇಡಿಕೆ ಕುಸಿದಿದೆ. ವಾಹನ ವಲಯಕ್ಕೆ ಅತಿ ಹೆಚ್ಚಿನ ಪರಿಣಾಮ ಬೀರಿದೆ’ ಎಂದು ಒಕ್ಕೂಟದ ಅಧ್ಯಕ್ಷ ರಾಜನ್‌ ವಧೇರಾ ತಿಳಿಸಿದ್ದಾರೆ.

‘ಜಿಡಿಪಿ ಬೆಳವಣಿಗೆ ಮಂದಗತಿಯಲ್ಲಿ ಇರಲಿರುವುದರಿಂದ ವಾಹನ ವಲಯದ ಒಟ್ಟಾರೆ ಮುನ್ನೋಟ ಶೇ 26–45 ರಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರವು ಉತ್ತೇಜನಾ ಕೊಡುಗೆ ನೀಡಬೇಕಾಗಿದೆ’ ಎಂದೂ ಹೇಳಿದ್ದಾರೆ.

ದ್ವಿಚಕ್ರವಾಹನ ಮಾರಾಟ ಶೇ 74ರಷ್ಟು, ತ್ರಿಚಕ್ರವಾಹನ ಮಾರಾಟ ಶೇ 91ರಷ್ಟು ಕುಸಿತ ಕಂಡಿದೆ.

ಜೂನ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 49.59 ರಷ್ಟು ಇಳಿಕೆ ಕಂಡಿದೆ.

ಮಾರಾಟ ವಿವರ

1.53 ಲಕ್ಷ

2020 ಏಪ್ರಿಲ್‌–ಜೂನ್‌

7.12 ಲಕ್ಷ

2019ರ ಏಪ್ರಿಲ್‌–ಜೂನ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು