ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 24ಕ್ಕೆ ಪತಂಜಲಿ ಆಯುರ್ವೇದ ಸಂಸ್ಥೆಯ ಒಡೆತನದ ರುಚಿ ಸೋಯಾ ಎಫ್‌ಪಿಒ

₹4,300 ಕೋಟಿ ಬಂಡವಾಳ ಸಂಗ್ರಹ ನಿರೀಕ್ಷೆ
Last Updated 12 ಮಾರ್ಚ್ 2022, 11:30 IST
ಅಕ್ಷರ ಗಾತ್ರ

ನವದೆಹಲಿ: ಪತಂಜಲಿ ಆಯುರ್ವೇದ ಸಂಸ್ಥೆಯ ಒಡೆತನದ ರುಚಿ ಸೋಯಾ ಕಂಪನಿಯು ₹ 4,300 ಕೋಟಿ ಬಂಡವಾಳ ಸಂಗ್ರಹಿಸಲು ಎಫ್‌ಪಿಒ (ಫಾಲೊ ಆನ್‌ ಪಬ್ಲಿಕ್‌ ಆಫರ್‌) ಮೂಲಕ ಮಾರ್ಚ್‌ 24ರಂದು ಬಂಡವಾಳ ಮಾರುಕಟ್ಟೆ ಪ್ರವೇಶಿಲಿದೆ.

ಆಡಳಿತ ಮಂಡಳಿಯು ಎಫ್‌ಪಿಒಗೆ ಒಪ್ಪಿಗೆ ನೀಡಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಎಫ್‌ಪಿಒ ವಿತರಣೆಯು ಮಾರ್ಚ್ 24ರಂದು ಆರಂಭ ಆಗಲಿದ್ದು, 28ರಂದು ಮುಕ್ತಾಯ ಆಗಲಿದೆ.

ಕಂಪನಿಯು 2021ರ ಜೂನ್‌ನಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ)ಎಫ್‌ಪಿಒ ಕುರಿತು ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿತ್ತು. 2021ರ ಆಗಸ್ಟ್‌ನಲ್ಲಿ ಸೆಬಿ ಅದಕ್ಕೆ ಒಪ್ಪಿಗೆ ನೀಡಿದೆ.

ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳಲ್ಲಿ ಸಾರ್ವಜನಿಕ ಷೇರು ಪಾಲು ಕನಿಷ್ಠ ಶೇ 25ರಷ್ಟು ಇರಬೇಕು ಎನ್ನುವ ಸೆಬಿಯ ನಿಯಮಕ್ಕೆ ಅನುಗುಣವಾಗಿ ಕಂಪನಿಯು ಎಫ್‌ಪಿಒಗೆ ಮುಂದಾಗಿದೆ. ಇಲ್ಲಿ ಸಂಗ್ರಹ ಆಗಲಿರುವ ಹಣವನ್ನು ಬಾಕಿ ಉಳಿಸಿಕೊಂಡಿರುವ ಕೆಲವು ಸಾಲಗಳ ಮರುಪಾವತಿ ಮಾಡಲು, ದುಡಿಯುವ ಬಂಡವಾಳದ ಅಗತ್ಯವನ್ನು ಈಡೇರಿಸಿಕೊಳ್ಳಲು ಹಾಗೂ ಇನ್ನಿತರೆ ಕಾರ್ಪೊರೇಟ್‌ ಉದ್ದೇಶಗಳಿಗೆ ಬಳಸಿಕೊಳ್ಳಲಾಗುವುದು ಎಂದು ಕಂಪನಿಯು ಕರಡು ದಾಖಲೆಪತ್ರದಲ್ಲಿ ತಿಳಿಸಿದೆ.

ದಿವಾಳಿ ಪ್ರಕ್ರಿಯೆಗೆ ಒಳಗಾಗಿದ್ದ ರುಚಿ ಸೋಯಾ ಕಂಪನಿಯನ್ನು ಪತಂಜಲಿ ಆಯುರ್ವೇದ ಸಂಸ್ಥೆಯು 2019ರಲ್ಲಿ ಸ್ವಾಧೀನಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT