ಬೆಂಗಳೂರು: ಮೊಬೈಲ್ ವಾಲೆಟ್ ‘ಪೇಟಿಎಂ’ನ ಅಂಗಸಂಸ್ಥೆಯಾಗಿರುವ ‘ಪೇಟಿಎಂ ಮನಿ ಲಿಮಿಟೆಡ್’, ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಸುಲಭವಾಗಿ ಹಣ ಹೂಡಿಕೆ ಮಾಡಲು ಪ್ರತ್ಯೇಕ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದೆ.

ಮ್ಯೂಚುವಲ್ ಫಂಡ್ ಹೂಡಿಕದಾರರ ಸಂಖ್ಯೆಯನ್ನು 3ರಿಂದ 5 ವರ್ಷಗಳಲ್ಲಿ ದುಪ್ಪಟ್ಟುಗೊಳಿಸುವ ಗುರಿಯನ್ನು ಹೊಂದಿರುವ ಈ ಆ್ಯಪ್ (Paytm Money), ಆಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಲಭ್ಯ ಇದೆ.

‘ಸಂಪತ್ತು ಸೃಷ್ಟಿಸುವ ಅವಕಾಶಗಳನ್ನು ಹೆಚ್ಚೆಚ್ಚು ಹೂಡಿಕೆದಾರರಿಗೆ ತಲುಪಿಸಬೇಕು ಎನ್ನುವುದು ‘ಪೇಟಿಎಂ ಮನಿ’ಯ ಉದ್ದೇಶವಾಗಿದೆ. ಜನರು ಮಾಸಿಕ ಕಂತುಗಳ ಮೂಲಕ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹಣ ತೊಡಗಿಸುವುದಕ್ಕೆ ‘ಪೇಟಿಎಂ ಮನಿ’ ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.