ಪೇಟಿಎಂ ಮನಿ: ನೋಂದಣಿ ನಂತರ ಪಾವತಿ ಸೇವೆ ಚಾಲನೆ

7

ಪೇಟಿಎಂ ಮನಿ: ನೋಂದಣಿ ನಂತರ ಪಾವತಿ ಸೇವೆ ಚಾಲನೆ

Published:
Updated:

ಬೆಂಗಳೂರು: ಮ್ಯೂಚುವಲ್ ಫಂಡ್ ಹೂಡಿಕೆ ಸುಗಮಗೊಳಿಸಿರುವ ಪೇಟಿಎಂ ಮನಿ, ‘ಸದ್ಯ ನೋಂದಣಿ ಮಾಡಿಕೊಳ್ಳಿ, ನಂತರ ಪಾವತಿಸಿ’ ಸೇವೆ ಆರಂಭಿಸಿದೆ.

ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್) ಮೂಲಕ ಶಿಸ್ತುಬದ್ಧವಾಗಿ ಹಣ ಹೂಡುವ ಪ್ರವೃತ್ತಿಯನ್ನು ಪೇಟಿಎಂ ಮನಿ ಉತ್ತೇಜಿಸುತ್ತದೆ. ಇಲ್ಲಿ ಹಣ ತೊಡಗಿಸುವವರ ಪೈಕಿ ಶೇಕಡ 75ರಷ್ಟು ಜನ ‘ಸಿಪ್’ ವಿಧಾನ ಬಳಸುತ್ತಿ
ದ್ದಾರೆ. ಇನ್ನುಮುಂದೆ  ಹೂಡಿಕೆದಾರರು ಹೊಸ ಸೌಲಭ್ಯದ ಮೂಲಕ ಮತ್ತಷ್ಟು ಸುಲಭವಾಗಿ ಹಣ ಹೂಡಬಹುದು. ‘ಸಿಪ್’ ವಿಧಾನದ ಮೂಲಕ ಪಾವತಿಸುವ ಆಯ್ಕೆ ನೋಂದಾಯಿಸುವಾಗ, ‘ತಡ ಪಾವತಿ’ ಅವಕಾಶವನ್ನೂ ಆಯ್ಕೆ ಮಾಡಿಕೊಳ್ಳಬಹುದು’ ಎಂದು ಕಂಪನಿಯ ನಿರ್ದೇಶಕ ಪ್ರವೀಣ್ ಜಾಧವ್ ತಿಳಿಸಿದ್ದಾರೆ.

ಹೂಡಿಕೆದಾರರು `ಆಟೊ-ಪೇ’ ವಿಧಾನ ಆಯ್ಕೆ ಮಾಡಿಕೊಂಡಿದ್ದರೆ ತಿಂಗಳ ನಿರ್ದಿಷ್ಟ ದಿನ ನಿಗದಿತ ಮೊತ್ತವು ಸೇರ್ಪಡೆಯಾಗುತ್ತದೆ. ಇದರ ಬದಲು, ಹೂಡಿಕೆದಾರರು ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ವಿಧಾನ ಆಯ್ಕೆ ಮಾಡಿಕೊಂಡಿದ್ದರೆ, ಮಾಸಿಕ ಕಂತಿನ ಸಂಬಂಧ ನಿರ್ದಿಷ್ಟ ದಿನ ಜ್ಞಾಪನಾ ಸಂದೇಶ ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !