ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆಯಿಂದಾಗಿ ಮಣ್ಣು ಸೇರುತ್ತಿರುವ ಕಾಳು ಮೆಣಸು

ಕೊಡಗಿನಲ್ಲಿ ನಿರಂತರವಾಗಿ ಸುರಿಯುತ್ತಲೇ ಇರುವ ಮಳೆ
Last Updated 26 ಆಗಸ್ಟ್ 2022, 20:03 IST
ಅಕ್ಷರ ಗಾತ್ರ

ಸೋಮವಾರಪೇಟೆ (ಕೊಡಗು ಜಿಲ್ಲೆ): ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಕಾಳುಮೆಣಸಿನ ಫಸಲು ಮೂರು ವರ್ಷಗಳಿಂದ ಉದುರಿ ಮಣ್ಣು ಸೇರುತ್ತಿದೆ. ನಿರಂತರ ಮಳೆಯಿಂದಾಗಿ ಈ ವರ್ಷವೂ ಬೆಳೆಗಾರರು ನಷ್ಟದ ಸುಳಿಗೆ ಸಿಲುಕಿದ್ದಾರೆ.

ಈ ಬಾರಿ ಸಕಾಲಕ್ಕೆ ಮಳೆ ಸುರಿದು ಗಿಡಗಳಲ್ಲಿ ಕಾಳು ಕಟ್ಟಿತ್ತು. ಆದರೆ ನಿರಂತರ ಮಳೆ, ಶೀತ ಹೆಚ್ಚಾಗಿ ಕಾಫಿ ಹಾಗೂ ಮೆಣಸಿನ ಫಸಲು ಉದುರಿದೆ. ಮೆಣಸಿನ ಬಳ್ಳಿಗೆ ಕೊಳೆರೋಗ ಬಂದಿದ್ದು ಬಳ್ಳಿಗಳು ಒಣಗಲಾರಂಭಿಸಿವೆ.

ಹೆಚ್ಚಿನ ಬೆಳೆಗಾರರು ಮಳೆಯಾ
ಶ್ರಿತ ಕೃಷಿ ಮಾಡುತ್ತಾರೆ. ಐದು ವರ್ಷ
ಗಳಿಂದಲೂ ವ್ಯತಿರಿಕ್ತ ಹವಾಮಾನ
ದಿಂದಾಗಿ ಮೆಣಸಿನ ಫಸಲು ಬಳ್ಳಿಯಲ್ಲಿ ನಿಲ್ಲುತ್ತಿಲ್ಲ. ಶೀತದ ಪ್ರಮಾಣ ಹೆಚ್ಚಾಗಿ ರೋಗಪೀಡಿತವಾಗಲಿದ್ದು, ಬಳ್ಳಿಯನ್ನೇ ಕಳೆದುಕೊಳ್ಳಬೇಕಾಗಿದೆ.

ತಾಲ್ಲೂಕಿನಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಕೃಷಿ
ಇದೆ. ಇತ್ತೀಚಿಗೆ ಕಾಫಿ ಬೆಲೆ ಏರಿಳಿತ ಹಾಗೂ ಅರೇಬಿಕಾ ಕಾಫಿಗೆ ಬಿಳಿಕಾಂಡ ಕೊರಕದ ಹಾವಳಿಯಿಂದಾಗಿ ನಷ್ಟ ಆಗುತ್ತಿದೆ.

ಕಳೆದ ವರ್ಷ ತಾಲ್ಲೂಕಿನ 3,200 ಹೆಕ್ಟೇರ್‌ನಲ್ಲಿದ್ದ ಶೇ 33ಕ್ಕಿಂತಲೂ ಅಧಿಕ ಫಸಲು ನಷ್ಟವಾಗಿತ್ತು. ‘ನಷ್ಟದ ಪ್ರಮಾಣ ಕೆಲವೆಡೆ ಶೇ 90 ರಷ್ಟಿದೆ’ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರ
ಸಂತೆ ಹಾಗೂ ಸೋಮವಾರಪೇಟೆ ಕಸಬಾ ಹೋಬಳಿಗಳಲ್ಲಿ ಮೆಣಸಿನ ಬೆಳೆ ನಷ್ಟವಾಗಿದೆ.

‘ಕಾಳು ಮೆಣಸಿಗೆ ಕೊಳೆರೋಗ ಬಂದಿದೆ. ಈಗಲೂ ರೋಗ ಪ್ರಾರಂಭದ ಹಂತದಲ್ಲಿದೆ. ಮಳೆ ಬಿಡುವು ನೀಡಿದ ತಕ್ಷಣ ಮಿಶ್ರಣವನ್ನು ಸಿಂಪಡಿಸಿದರೆ ಹತೋಟಿಗೆ ಬರುತ್ತದೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT