ಶನಿವಾರ, ಏಪ್ರಿಲ್ 17, 2021
23 °C

ಬಂಡವಾಳ ಹೂಡಿಕೆಗೆ ಪೆರು ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಣಿಗಾರಿಕೆ, ಸಾಫ್ಟ್‌ವೇರ್ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ತಮ್ಮ ದೇಶದಲ್ಲಿ ವಿಪುಲ ಅವಕಾಶಗಳು ಇವೆ ಎಂದು ಪೆರು ರಾಯಭಾರಿ ಕಾರ್ಲೋಸ್ ಆರ್ ಪೋಲೊ ತಿಳಿಸಿದ್ದಾರೆ.

ಪೆರು ದಿನಾಚರಣೆಯ ಸಂದರ್ಭದಲ್ಲಿ ಏರ್ಪಡಿಸಿದ್ದ ಜವಳಿ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ‘ಪೆರುವಿನ ಕೈಗಾ
ರಿಕಾ ಕ್ಷೇತ್ರದಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣವಿದೆ’ ಎಂದರು.

‘ಚೀನಾ ಮತ್ತು ಅಮೆರಿಕದ ನಂತರ ಭಾರತವು ಪೆರುವಿನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಚಿನ್ನ ಮತ್ತಿತರ ಅಮೂಲ್ಯ ಲೋಹಗಳಿಗೆ ಪೆರು ಹೆಸರುವಾಸಿಯಾಗಿದೆ. ಕರ್ನಾಟಕ ಸೇರಿದಂತೆ ಭಾರತದ ಗಣಿಗಾರಿಕೆ ಮತ್ತು ಐ.ಟಿ ವಹಿವಾಟಿನ ಹೂಡಿಕೆದಾರರಿಗೆ ಆತ್ಮೀಯ ಸ್ವಾಗತ ಕೋರುತ್ತದೆ’ ಎಂದೂ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು