ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನ್ನೊಂದನೆಯ ದಿನವೂ ತೈಲ ಬೆಲೆ ಏರಿಕೆ

Last Updated 19 ಫೆಬ್ರುವರಿ 2021, 15:55 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಬೆಲೆಯು ದೆಹಲಿಯಲ್ಲಿ ಶುಕ್ರವಾರ ಲೀಟರ್‌ಗೆ ₹ 90ರ ಗಡಿ ದಾಟಿದೆ. ಸತತ ಹನ್ನೊಂದನೆಯ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹ 90.19 ಆಗಿದೆ. ಅಲ್ಲಿ ಡೀಸೆಲ್‌ ಬೆಲೆ ಲೀಟರ್‌ಗೆ ₹ 80.60 ಆಗಿದೆ.

ಪೆಟ್ರೋಲ್ ಬೆಲೆಯು ಮುಂಬೈನಲ್ಲಿ ₹ 96.62ಕ್ಕೆ ಹೆಚ್ಚಳವಾಗಿದೆ.

ಗುರುವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 65 ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದೆ. ಕಳೆದ ಹನ್ನೊಂದು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ₹ 3.24ರಷ್ಟು ಹೆಚ್ಚಳ ಆಗಿದೆ. 2010ರಲ್ಲಿ ಪೆಟ್ರೋಲ್‌ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿದ ನಂತರ ಆಗಿರುವ ದಾಖಲೆಯ ಹೆಚ್ಚಳ ಇದು. ಡೀಸೆಲ್ ಬೆಲೆ ಹನ್ನೊಂದು ದಿನಗಳಲ್ಲಿ ₹ 3.47ರಷ್ಟು ಹೆಚ್ಚಾಗಿದೆ.

ಶುಕ್ರವಾರದ ಬೆಲೆ ಹೆಚ್ಚಳದ ಪರಿಣಾಮವಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ₹ 93.21ಕ್ಕೆ, ಡೀಸೆಲ್‌ ₹ 85.44ಕ್ಕೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT