ಶನಿವಾರ, ಡಿಸೆಂಬರ್ 5, 2020
23 °C

ತೈಲ ಬೆಲೆ ಎರಡನೆಯ ದಿನವೂ ಹೆಚ್ಚಳ

ಪಿಟಿಐ, ಎಎಫ್‌ಪಿ, ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ/ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಶನಿವಾರ ಲೀಟರ್‌ಗೆ 15 ಪೈಸೆಯಷ್ಟು ಹೆಚ್ಚಿಸಲಾಗಿದೆ. ಡೀಸೆಲ್ ಬೆಲೆಯಲ್ಲಿ 20 ಪೈಸೆ ಹೆಚ್ಚಳ ಆಗಿದೆ. ಶುಕ್ರವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿಸಲಾಗಿತ್ತು.

ಬೆಂಗಳೂರಿನಲ್ಲಿ ಶನಿವಾರ ಡೀಸೆಲ್‌ ಪ್ರತಿ ಲೀಟರ್‌ಗೆ ₹ 75.14ರಂತೆ ಮಾರಾಟವಾಗಿದೆ. ಶುಕ್ರವಾರದ ಬೆಲೆಗೆ ಹೋಲಿಸಿ
ದರೆ 23 ಪೈಸೆಯಷ್ಟು ಹೆಚ್ಚಳವಾದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ ಬೆಲೆಯಲ್ಲಿ 18 ಪೈಸೆಯಷ್ಟು ಹೆಚ್ಚಳ ಆಗಿದ್ದು,
₹ 84.10ರಂತೆ ಮಾರಾಟವಾಗಿದೆ.

ಸರಿಸುಮಾರು ಎರಡು ತಿಂಗಳ ಕಾಲ ತೈಲ ಬೆಲೆಯಲ್ಲಿ ಬದಲಾವಣೆ ಆಗಿರಲಿಲ್ಲ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆದ ಏರಿಕೆಯ ಕಾರಣದಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು