ಸೋಮವಾರ, ಫೆಬ್ರವರಿ 24, 2020
19 °C

ಸತತ ಐದನೇ ದಿನವೂ ಇಳಿದ ಪೆಟ್ರೋಲ್‌–ಡೀಸೆಲ್‌ ದರ; ಜನವರಿಯಿಂದ ₹3ರಷ್ಟು ಕಡಿತ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆರಿಕ–ಇರಾನ್‌ ನಡುವಿನ ಬಿಕ್ಕಟ್ಟು ತಣ್ಣಗಾಗುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿಯೂ ಇಳಿಕೆಯಾಯಿತು. ತೈಲ ಬೇಡಿಕೆ ಕುಸಿತದ ಪರಿಣಾಮವೂ ಸಹ ಕಚ್ಚಾ ತೈಲ ದರ ಇಳಿಕೆಗೆ ಕಾರಣವಾಗಿದ್ದು, ಭಾರತದಲ್ಲಿ ಐದನೇ ದಿನವೂ ತೈಲ ದರ ಕಡಿಮೆಯಾಗಿದೆ. ಸೋಮವಾರ ಪೆಟ್ರೋಲ್‌ ಪ್ರತಿ ಲೀಟರ್‌ಗೆ 13–16 ಪೈಸೆ ಹಾಗೂ ಡೀಸೆಲ್‌ ಪ್ರತಿ ಲೀಟರ್‌ಗೆ 16–20 ಪೈಸೆ ಕಡಿಮೆಯಾಗಿದೆ. 

ಬೆಂಗಳೂರಿನಲ್ಲಿ ಇಂದು ಲೀಟರ್‌ ಪೆಟ್ರೋಲ್‌ಗೆ ₹74.55 ಮತ್ತು ಡೀಸೆಲ್‌ಗೆ ₹67.28 ಆಗಿದೆ. ಫೆಬ್ರುವರಿ 4ರಂದು ನಗರದಲ್ಲಿ ಡೀಸೆಲ್‌ ಬೆಲೆ ಲೀಟರ್‌ಗೆ ₹68.32 ಹಾಗೂ ಪೆಟ್ರೋಲ್‌ ₹75.52 ನಿಗದಿಯಾಗಿತ್ತು. 

ಸೋಮವಾರ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ ₹72.10, ಡೀಸೆಲ್‌ಗೆ ₹65.07; ಮುಂಬೈನಲ್ಲಿ ಪೆಟ್ರೋಲ್‌ಗೆ ₹77.76, ಡೀಸೆಲ್‌ಗೆ ₹68.19; ಕೋಲ್ಕತ್ತಾದಲ್ಲಿ ಪೆಟ್ರೋಲ್‌ ದರ ₹74.74, ಡೀಸೆಲ್‌ ದರ ₹68.72 ಹಾಗೂ ಚೆನ್ನೈನಲ್ಲಿ ಪೆಟ್ರೋಲ್‌ ₹74.90, ಡೀಸೆಲ್‌ ದರ ₹68.72 ಇದೆ. 

2020ರ ಜನವರಿ 1ರಿಂದ ಭಾರತದಲ್ಲಿ ತೈಲ ಬೆಲೆ ಪ್ರತಿ ಲೀಟರ್‌ಗೆ ಸುಮಾರು ₹3ರಷ್ಟು ಅಗ್ಗವಾಗಿದೆ. 

ಚೀನಾದಲ್ಲಿ ಸುಮಾರು 900 ಜನರ ಸಾವಿಗೆ ಕಾರಣವಾಗಿರುವ ಕೊರೊನಾವೈರಸ್‌ ವ್ಯಾಪಿಸುತ್ತಿದ್ದು, ಚೀನಾದಲ್ಲಿ ತೈಲ ಬೇಡಿಕೆ ಕುಸಿದಿದೆ. ಬೇಡಿಕೆ ಇಳಿಕೆಯಾಗಿದ್ದರೂ ಕಚ್ಚಾ ತೈಲ ಪೂರೈಕೆ ಹೆಚ್ಚಿರುವುದು ಭಾರತದಲ್ಲಿ ತೈಲ ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಬಳಕೆ ಅಗತ್ಯವಿರುವ ಶೇ 80ರಷ್ಟು ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. 

ದೇಶದ ತೈಲ ಮಾರಾಟ ಕಂಪನಿಗಳು ನಿತ್ಯವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪರಿಷ್ಕರಿಸುತ್ತವೆ ಹಾಗೂ ಹೊಸ ದರವು ಬೆಳಿಗ್ಗೆ 6ರಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ನಿಗದಿ ಪಡಿಸಲಾಗುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು