ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಸ್ಪರ ಕೈಕೈ ಮಿಲಾಯಿಸಿದ ಬಿಜೆಪಿ–ಜೆಡಿಎಸ್‌ ಮುಖಂಡರು!

Last Updated 28 ಏಪ್ರಿಲ್ 2018, 9:59 IST
ಅಕ್ಷರ ಗಾತ್ರ

ಧಾರವಾಡ: ತಿರಸ್ಕೃತಗೊಂಡ ನಾಮಪತ್ರವನ್ನು ಮರಳಿ ಪರಿಶೀಲಿಸಿ ಎಂದು ಕೇಳಲು ಬಂದಿದ್ದ ಜೆಡಿಎಸ್‌ ಮುಖಂಡ ಗುರುರಾಜ ಹುಣಸೀಮರದ ಹಾಗೂ ಬಿಜೆಪಿ ಮುಖಂಡರ ನಡುವೆ ಶುಕ್ರವಾರ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ನಾಮಪತ್ರ ಹಿಂಪಡೆಯುವ ಸಮಯ ಮೀರಿದೆ. ಹೀಗಾಗಿ, ಒಳ ಹೋಗಬಾರದು ಎಂದು ಹುಣಸಿಮರದ ಅವರನ್ನು ಬಿಜೆಪಿ ಮುಖಂಡರು ತಡೆದರು. ಇದರಿಂದಾಗಿ ಎರಡೂ ಪಕ್ಷಗಳವರ ನಡುವೆ ವಾಗ್ವಾದ ನಡೆದು ಒಂದು ಹಂತಕ್ಕೆ ಕೈಕೈ ಮಿಲಾಯಿಸುವಷ್ಟರ ಮಟ್ಟಿಗೆ ವಿಕೋಪಕ್ಕೆ ತಿರುಗಿತು.

ಇದಕ್ಕೆ ತಕರಾರು ತೆಗೆದ ಹುಣಸಿಮರದ, ಒಳ ಹೋಗಬೇಡ ಎನ್ನಲು ನೀವು ಯಾರು. ಚುನಾವಣಾಧಿಕಾರಿಗಳ ಬಳಿ ವಿಚಾರಿಸಲು ಬಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಇಬ್ಬರು ಮುಖಂಡರು ಪರಸ್ಪರ ಕೈ ಕೈ ಮಿಲಾಯಿಸಿದರು. ಕೂಡಲೇ  ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕಿತ್ತೂರು ಅವರು ನಾಮಪತ್ರ ವಾಪಸ್‌ ಪಡೆದಿದ್ದರಿಂದ, ತನ್ನನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಪರಿಗಣಿಸಬೇಕು ಎಂದು ಗುರುರಾಜ ಹುಣಸಿಮರದ ಚುನಾವಣಾ ಧಿಕಾರಿಯನ್ನು ಕೋರಿಕೊಂಡರು. ಆಗ ಅಲ್ಲಿಗೆ ಬಂದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸಂಜಯ ಕಪಟ್ಕರ್‌ ಇತರರು ಹುಣಸಿಮರದ ಮನವಿಯ ಪುರಸ್ಕರಿಸಬಾರದು ಎಂದು ಪಟ್ಟು ಹಿಡಿದರು.

ಘಟನೆಗೆ ಸಂಬಂಧಿಸಿದಂತೆ ಗುರುರಾಜ ಹುಣಸಿಮರದ ಉಪನಗರ ಠಾಣೆಗೆ ದೂರು ನೀಡಿದ್ದು, ಅರವಿಂದ ಬೆಲ್ಲದ ಹಾಗೂ ಅವರ ಸಹಚರರು ನನ್ನ ಮೇಲೆ ಗೂಂಡಾ ಪ್ರವೃತ್ತಿ ಮಾಡಿದ್ದು, ಕೊಲೆಗೆ ಯತ್ನಿಸಿದ್ದಾರೆ’ ಎಂದು ಅರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಯ ರಾಜು ಕೊಟೆಣ್ಣವರ ದೂರು ನೀಡಿದ್ದು, ‘ಹುಣಸಿಮರದ ಹಾಗೂ ಆತನ ಸಂಗಡಿಗರು ತನಗೆ ಜಾತಿ ನಿಂದನೆ ಮಾಡಿದ್ದಾರೆ. ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರು ನೀಡಿದ್ದಾರೆ.

ಈ ಎರಡು ದೂರಿನ ಅರ್ಜಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿಲ್ಲ ಎಂದು ಠಾಣೆ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT