ನವದೆಹಲಿ: ದೇಶದ ಪ್ರಮುಖ ಅನಿಲ ಆಮದುದಾರ ಕಂಪನಿ ಪೆಟ್ರೋನೆಟ್ ಎಲ್ಎನ್ಜಿ, ₹12,116 ಕೋಟಿ ಸಾಲ ಪಡೆಯಲು ನಿರ್ಧರಿಸಿದೆ. ಈ ಹಣವನ್ನು ಘಟಕದ ವಿಸ್ತರಣೆಗೆ ಬಳಸಿಕೊಳ್ಳಲಾಗುವುದು ಎಂದು ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥ ಸೌರವ್ ಮಿತ್ರ ಸೋಮವಾರ ತಿಳಿಸಿದ್ದಾರೆ.

ಕಂಪನಿಯು ಗುಜರಾತ್ನಲ್ಲಿ ಪೆಟ್ರೋಕೆಮಿಕಲ್ ಘಟಕವನ್ನು ಸ್ಥಾಪಿಸುತ್ತಿದೆ. ಇದಕ್ಕೆ ಅಂದಾಜು ₹20,600 ಕೋಟಿ ವೆಚ್ಚವಾಗಲಿದೆ. ಅಲ್ಲದೆ, ಮುಂದಿನ ಕೆಲವು ವರ್ಷದಲ್ಲಿ ₹30 ಸಾವಿರ ಕೋಟಿಯನ್ನು ಖರ್ಚು ಮಾಡಲಿದ್ದು, ಈ ಪೈಕಿ ಹೆಚ್ಚಿನ ಹಣವನ್ನು ಪೆಟ್ರೋಕೆಮಿಕಲ್ ಯೋಜನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.

2026–27ರ ಆರ್ಥಿಕ ವರ್ಷದಲ್ಲಿನ ಕಂಪನಿಯ ಬಂಡವಾಳ ವೆಚ್ಚವು ಪ್ರಸಕ್ತ ಆರ್ಥಿಕ ವರ್ಷಕ್ಕೆ ಅಂದಾಜು ಮಾಡಲಾಗಿರುವ ₹5 ಸಾವಿರ ಕೋಟಿಗಿಂತಲೂ ಹೆಚ್ಚಿರಲಿದೆ ಎಂದು ಹೇಳಿದೆ.

ಕಳೆದ ವಾರ ಕಂಪನಿಯ ಆಡಳಿತ ಮಂಡಳಿಯು, ಒರಿಸ್ಸಾದಲ್ಲಿ ವಾರ್ಷಿಕ 50 ಲಕ್ಷ ಟನ್ ಸಾಮರ್ಥ್ಯದ ಎಲ್ಎನ್ಜಿ ಆಮದು ಟರ್ಮಿನಲ್ ನಿರ್ಮಿಸಲು ಅನುಮೋದನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.