ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರಲೋಹದ ಉಕ್ಕು ತಯಾರಿಕೆಗೆ ಉತ್ತೇಜನ

Last Updated 22 ಜುಲೈ 2021, 16:38 IST
ಅಕ್ಷರ ಗಾತ್ರ

ನವದೆಹಲಿ: ಮಿಶ್ರಲೋಹದ ಉಕ್ಕು ಆಮದು ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು, ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿಯಲ್ಲಿ ಈ ವಲಯಕ್ಕೆ ₹ 6,322 ಕೋಟಿ ಘೋಷಿಸಿದೆ. ಈ ಕ್ರಮದಿಂದಾಗಿ 5.25 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ವಾಹನಗಳ ತಯಾರಿಕೆ, ಅನಿಲ ಮತ್ತು ತೈಲ ಸಾಗಣೆಯಲ್ಲಿ ಬಳಸುವ ಪೈಪ್‌ ಉತ್ಪಾದನೆ, ಬಾಯ್ಲರುಗಳು ಸೇರಿದಂತೆ ಹಲವು ವಸ್ತುಗಳ ಉತ್ಪಾದನೆಯಲ್ಲಿ ಮಿಶ್ರಲೋಹದ ಉಕ್ಕು ಬಳಕೆಯಾಗುತ್ತದೆ.

‘ಜಗತ್ತಿನಲ್ಲಿ ಕಚ್ಚಾ ಉಕ್ಕು ತಯಾರಿಕೆಯಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದೆ. ಹೀಗಿದ್ದರೂ ದೇಶವು ಮಿಶ್ರಲೋಹದ ಉಕ್ಕು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿ ಇದೆ. ಹೊಸ ಕ್ರಮವು, ಮಿಶ್ರಲೋಹದ ಉಕ್ಕು ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿ ಆಗಿಸುವ ಉದ್ದೇಶ ಹೊಂದಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.

ಹೊಸ ಕ್ರಮದಿಂದಾಗಿ ₹ 40 ಸಾವಿರ ಕೋಟಿ ಹೂಡಿಕೆ ಆಗಲಿದೆ. ಈ ಯೋಜನೆಯು ಐದು ವರ್ಷಗಳವರೆಗೆ ಜಾರಿಯಲ್ಲಿ ಇರಲಿದೆ. ಭಾರತದಲ್ಲಿ ನೋಂದಣಿ ಆಗಿರುವ, ಮಿಶ್ರಲೋಹದ ಉಕ್ಕು ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಯಾವುದೇ ಕಂಪನಿಗೆ ಈ ಯೋಜನೆಯಲ್ಲಿ ಭಾಗಿಯಾಗಲು ಅವಕಾಶ ಇದೆ. ‘ವರ್ಷವೊಂದರಲ್ಲಿ ಒಂದು ಕಂಪನಿಗೆ ಗರಿಷ್ಠ ₹ 200 ಕೋಟಿ ನೆರವು ನೀಡಬಹುದು’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT