ಸೋಮವಾರ, ಅಕ್ಟೋಬರ್ 18, 2021
28 °C

ಖಾತೆಯಲ್ಲಿ ಕನಿಷ್ಠ ಮೊತ್ತ ಕಾಪಾಡದವರಿಂದ ₹ 170 ಕೋಟಿ ದಂಡ ಸಂಗ್ರಹಿಸಿದ ಪಿಎನ್‌ಬಿ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ಸ್ವಾಮ್ಯದ ಪಂಜಾಬ್ ನ್ಯಾಷನಲ್‌ ಬ್ಯಾಕ್‌ (ಪಿಎನ್‌ಬಿ), ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವ ಮೂಲಕ 2020–21ನೆಯ ಸಾಲಿನಲ್ಲಿ ಸರಿಸುಮಾರು ₹ 170 ಕೋಟಿ ಸಂಗ್ರಹಿಸಿದೆ.

2019–20ರಲ್ಲಿ ಈ ಬಗೆಯ ದಂಡ ಸಂಗ್ರಹದ ಮೂಲಕ ಬ್ಯಾಂಕ್‌ಗೆ ಬಂದ ಆದಾಯದ ಮೊತ್ತವು ₹ 286 ಕೋಟಿ ಆಗಿತ್ತು ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ಅಡಿ ಪಡೆದುಕೊಂಡ ಅಂಕಿ–ಅಂಶಗಳಿಂದ ಗೊತ್ತಾಗಿದೆ. ಬ್ಯಾಂಕ್‌ಗಳು ಈ ಬಗೆಯ ದಂಡಗಳನ್ನು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಗ್ರಾಹಕರಿಂದ ವಸೂಲಿ ಮಾಡುತ್ತವೆ.

ಪಿಎನ್‌ಬಿ ಬ್ಯಾಂಕ್‌ ಎಟಿಎಂ ವಹಿವಾಟು ಶುಲ್ಕದ ಮೂಲಕ 2020–21ರಲ್ಲಿ ₹ 74.28 ಕೋಟಿ ಆದಾಯ ಗಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು