ಮಂಗಳವಾರ, ಜೂನ್ 28, 2022
20 °C

₹ 6 ಸಾವಿರ ಕೋಟಿ ಲಾಭ ಗಳಿಕೆ: ಪಿಎನ್‌ಬಿ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ನಿವ್ವಳ ಲಾಭವು ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದ್ದು ₹ 6 ಸಾವಿರ ಕೋಟಿಗೆ ತಲುಪಲಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಶನಿವಾರ ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಬ್ಯಾಂಕ್‌ನ ಲಾಭವು 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ರಲ್ಲಿ ಐದು ಪಟ್ಟಿಗಿಂತಲೂ ಹೆಚ್ಚು ಏರಿಕೆ ಕಂಡು ₹ 2,022 ಕೋಟಿಗಳಿಗೆ ತಲುಪಿದೆ. 2019–20ರಲ್ಲಿ ₹ 363 ಕೋಟಿ ಲಾಭ ಆಗಿತ್ತು ಎಂದು ಬ್ಯಾಂಕ್‌ ತಿಳಿಸಿದೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ನೀಡಿಕೆಯಲ್ಲಿನ ಬೆಳವಣಿಗೆ ಮತ್ತು ಆರ್ಥಿಕತೆಯಲ್ಲಿನ ಬೇಡಿಕೆಯ ಮೇಲೆ ಪ್ರಸಕ್ತ ಹಣಕಾಸು ವರ್ಷದ ಪ್ರಗತಿ ಅವಲಂಬಿತವಾಗಿರಲಿದೆ. ಒಟ್ಟಾರೆ ನಿವ್ವಳ ಲಾಭವು ₹ 6 ಸಾವಿರ ಕೋಟಿಗಿಂತಲೂ ಕಡಿಮೆ ಇರಲಾರದು’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌. ಮಲ್ಲಿಕಾರ್ಜುನ ರಾವ್ ಅವರು ತಿಳಿಸಿದ್ದಾರೆ.

‘2021–22ರಲ್ಲಿ ಆರ್ಥಿಕತೆಯು ಶೇ 9.5ರಷ್ಟು ಬೆಳವಣಿಗೆ ಕಾಣಲಿದೆ ಎನ್ನುವ ಅಂದಾಜಿನ ಆಧಾರದ ಮೇಲೆ ಬ್ಯಾಂಕಿಂಗ್‌ ವಲಯದ ಸಾಲ ನೀಡಿಕೆಯ ಬೆಳವಣಿಗೆಯು ಶೇ 8ರಿಂದ ಶೇ 10ರ ನಡುವೆ ಇರಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು