ಪಾಲಿಸಿಕ್ಯೂ ವಹಿವಾಟು ಆರಂಭ
ಬೆಂಗಳೂರು: ಪಾಲಿಸಿಕ್ಯೂ ಕಂಪನಿಯು ದೇಶದಲ್ಲಿ ವಿವಿಧ ವಿಮಾ ಸೇವೆಗಳನ್ನು ಒದಗಿಸುವ ವಹಿವಾಟನ್ನು ಆರಂಭಿಸಿರುವುದಾಗಿ ತಿಳಿಸಿದೆ. ಕಂಪನಿಯು ತಾನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಐಆರ್ಡಿಎಐ) ಅಗತ್ಯ ಪರವಾನಗಿ ಪಡೆದಿರುವುದಾಗಿ ಹೇಳಿದೆ.
ವಿಮಾ ಉತ್ಪನ್ನಗಳನ್ನು ಖರೀದಿಸಲು ಬಯಸುವವರು ಈ ಕಂಪನಿಯ ವೆಬ್ಸೈಟ್ (www.policicue.com) ಮೂಲಕ ತಮಗೆ ಅಗತ್ಯವಿರುವ ವಿಮೆಯನ್ನು ಪಡೆದುಕೊಳ್ಳಬಹುದು. ವಿಮಾ ಕ್ಲೇಮ್ಗಳ ಇತ್ಯರ್ಥಕ್ಕೆ ತನ್ನಲ್ಲಿ ಅನುಭವಿ ತಂಡ ಇದೆ ಎಂದು ಕಂಪನಿ ಹೇಳಿದೆ.
‘ನಮ್ಮ ವಹಿವಾಟು ಆರಂಭಿಸುತ್ತಿರುವುದು ಸಂತಸ ತಂದಿದೆ. ವಿಮಾ ಉತ್ಪನ್ನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ನಾವು ಬದಲಾವಣೆ ತರಲಿದ್ದೇವೆ ಎಂಬ ಭರವಸೆ ಇದೆ’ ಎಂದು ಕಂಪನಿಯ ಸಿಇಒ ಸಂಜಯ್ ವತ್ಸ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.