ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಜೀವ ವಿಮೆ ಪ್ರೀಮಿಯಂ ಪಾವತಿ ಅವಧಿ ಏಪ್ರಿಲ್ 30ರವರೆಗೆ ವಿಸ್ತರಣೆ

Last Updated 30 ಮಾರ್ಚ್ 2020, 15:26 IST
ಅಕ್ಷರ ಗಾತ್ರ

ನವದೆಹಲಿ:ದೇಶವ್ಯಾಪಿ ಲಾಕ್‍ಡೌನ್ ಆಗಿರುವ ಕಾರಣ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಪ್ರೀಮಿಯಂ ಪಾವತಿ ದಿನಾಂಕವನ್ನು 30 ಏಪ್ರಿಲ್ 2020ರ ವರೆಗೆ ವಿಸ್ತರಿಸಲಾಗಿದೆ. ಪ್ರೀಮಿಯಂ ಪಾವತಿ ಅಂತಿಮ ದಿನಾಂಕ 30 ಮಾರ್ಚ್ 2020 ಆಗಿತ್ತು.ಮುಂದಿನ ತಿಂಗಳು ಪ್ರೀಮಿಯಂ ಪಾವತಿಸುವಾಗಯಾವುದೇ ರೀತಿಯ ದಂಡ ವಸೂಲಿ ಮಾಡಲಾಗುವುದಿಲ್ಲ ಎಂದು ಅಂಚೆ ಜೀವ ವಿಮೆ ನಿರ್ದೇಶನಾಲಯ ಹೇಳಿದೆ.

ಅತ್ಯಗತ್ಯ ಸೇವೆಯ ಭಾಗವಾಗಿರುವುದಿಂದ ಹಲವಾರು ಅಂಚೆ ಕಚೇರಿಗಳು ಈಗಲೂ ಕಾರ್ಯವೆಸಗುತ್ತಿದ್ದರೂ ಜೀವ ವಿಮೆ ಪ್ರೀಮಿಯಂ ಪಾವತಿಗೆಗ್ರಾಹಕರ ಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಪ್ರೀಮಿಯಂ ಪಾವತಿದಿನಾಂಕವನ್ನು ವಿಸ್ತರಿಸಲಾಗಿದೆ.
ಅಂಚೆ ಇಲಾಖೆಯ ಈ ನಿರ್ಧಾರ ಸರಿಸುಮಾರು 13 ಲಕ್ಷ ಗ್ರಾಹಕರಿಗೆ ಸಮಾಧಾನ ತಂದಿದೆ. ಕಳೆದ ತಿಂಗಳು 42 ಲಕ್ಷ ಗ್ರಾಹಕರು ಪ್ರೀಮಿಯಂ ಪಾವತಿಸಿದ್ದು, ಮಾರ್ಚ್ 30ರ ವರಗೆ ಕೇವಲ 29 ಲಕ್ಷದಷ್ಟು ಜನ ಮಾತ್ರ ಪ್ರೀಮಿಯಂ ಪಾವತಿ ಮಾಡಿದ್ದಾರೆ.

ಪೋರ್ಟಲ್‌ನಲ್ಲಿ ನೋಂದಣಿ ಆಗಿರುವ ಗ್ರಾಹಕರು ಪಿಎಲ್‌ಐ (ಅಂಚೆ ಜೀವ ವಿಮೆ) ಗ್ರಾಹಕರ ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ಪಾವತಿಮಾಡಬಹುದಾಗಿದೆ ಎಂದು ಅಂಚೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT