ನವದೆಹಲಿ: ಟಿವಿ ಮತ್ತು ಗೃಹೋಪಯೋಗಿ ಸಲಕರಣೆ ತಯಾರಿಕಾ ಸಂಸ್ಥೆಗಳು ಮುಂದಿನ ತಿಂಗಳಿನಿಂದ ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ದರದ ಕುಸಿತ ಮತ್ತು ಕಸ್ಟಮ್ಸ್ ಸುಂಕ ಹೆಚ್ಚಳದಿಂದ ಕಚ್ಚಾ ಸರಕು ದುಬಾರಿಯಾಗಿತ್ತು.

ಹಬ್ಬದ ದಿನಗಳ ಮಾರಾಟ ಸಂದರ್ಭದಲ್ಲಿ ತಯಾರಕರು ತಾತ್ಕಾಲಿಕವಾಗಿ ಈ ಹೆಚ್ಚುವರಿ ವೆಚ್ಚ ಭರಿಸಿದ್ದರು. ಹಬ್ಬದ ದಿನಗಳ ಮಾರಾಟ ಕೊನೆಗೊಂಡಿರುವುದರಿಂದ ಮಾರಾಟ ಬೆಲೆ ಪರಿಷ್ಕರಿಸಲು ತೀರ್ಮಾನಿಸಿವೆ.

ಪ್ಯಾನಾಸಾನಿಕ್ ಇಂಡಿಯಾ ಕಂಪನಿ ತನ್ನ ಉತ್ಪನ್ನಗಳ ಬೆಲೆಯನ್ನು ಶೇ 7ರಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. ಹಾಯರ್, ಗೊದ್ರೇಜ್ ಅಪ್ಲೈಯನ್ಸಸ್ ಕೂಡ ಇದೇ ಹಾದಿಯಲ್ಲಿ ಸಾಗುವುದಾಗಿ ತಿಳಿಸಿವೆ.

ಬೆಲೆ ಪರಿಷ್ಕರಣೆಯ ಯಾವುದೇ ಆಲೋಚನೆ ಇಲ್ಲ ಎಂದು ಸೋನಿ ಇಂಡಿಯಾ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮಷಿನ್ ಹೊರತುಪಡಿಸಿ, ಗೃಹೋಪಯೋಗಿ ಸಲಕರಣೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳ ವಹಿವಾಟು ಏರಿಕೆ ಕಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.