ಗುರುವಾರ , ಸೆಪ್ಟೆಂಬರ್ 23, 2021
22 °C

‘ಮಾರ್ಚ್‌ ಅಂತ್ಯದೊಳಗೆ ಕೇಂದ್ರೋದ್ಯಮಗಳ ಖಾಸಗೀಕರಣ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಹಿನ್ನಡೆ ಅನುಭವಿಸಿದ್ದ ಕೇಂದ್ರೋದ್ಯಮಗಳ ಷೇರುವಿಕ್ರಯ ಪ್ರಕ್ರಿಯೆ ಮತ್ತೆ ಚುರುಕು ಪಡೆದುಕೊಂಡಿದ್ದು, ಮಾರ್ಚ್‌ ಅಂತ್ಯದೊಳಗಾಗಿ ಪೂರ್ಣಗೊಳ್ಳಲಿದೆ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತ್‌ ಪಾಂಡೆ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಂಸಘವು (ಸಿಐಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಏರ್‌ ಇಂಡಿಯಾ, ಬಿಪಿಸಿಎಲ್‌, ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಪವನ್‌ ಹನ್ಸ್‌, ಬಿಇಎಂಎಲ್‌ ಮತ್ತು ನೀಲಾಚಲ್‌ ಇಸ್ಪತ್‌ ನಿಗಮ ಲಿಮಿಟೆಡ್‌ನ ಖಾಸಗೀಕರಣವು ಈ ವರ್ಷವೇ ಪೂರ್ಣಗೊಳ್ಳದೆ. ಮಾಲೀಕತ್ವ ಮತ್ತು ನಿಯಂತ್ರಣದ ಬದಲಾವಣೆಯು ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಗಳ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ಅವರು ತಿಳಿಸಿದ್ದಾರೆ. ‘ಈ ಕಂಪನಿಗಳ ಖರೀದಿಗೆ ಹಲವರು ಆಸಕ್ತಿ ತೋರಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು 2021–22ರಲ್ಲಿ ಷೇರುವಿಕ್ರಯದ ಮೂಲಕ ಒಟ್ಟಾರೆ ₹ 1.75 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿದೆ. ಇದರಲ್ಲಿ ಎಲ್‌ಐಸಿಯ ಐಪಿಒ ಬಹಳ ಮುಖ್ಯವಾಗಿದೆ.

ಇಲ್ಲಿಯವರೆಗೆ ಆಕ್ಸಿಸ್‌ ಬ್ಯಾಂಕ್‌, ಎನ್‌ಎಂಡಿಸಿ ಮತ್ತು ಹೌಸಿಂಗ್‌ ಆ್ಯಂಡ್‌ ಅರ್ಬನ್‌ ಡೆವಲಪ್‌ಮೆಂಟ್ ಕಾರ್ಪೊರೇಷನ್‌ನಲ್ಲಿನ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 8,368 ಕೋಟಿ ಸಂಗ್ರಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು