ಗುರುವಾರ , ಸೆಪ್ಟೆಂಬರ್ 23, 2021
22 °C
ಲಿಂಕ್ಡ್‌ಇನ್‌ ಸಮೀಕ್ಷೆ

ವೃತ್ತಿಪರರ ವರಮಾನ, ಉಳಿತಾಯ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ವೃತ್ತಿಪರರು ತಮ್ಮ ವರಮಾನ ಮತ್ತು ಉಳಿತಾಯದ ಬಗ್ಗೆ ಹೊಂದಿರುವ ಸಕಾರಾತ್ಮಕ ಭಾವನೆಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಲಿಂಕ್ಡ್‌ಇನ್‌ ಹೇಳಿದೆ.

ಮೇ 4 ರಿಂದ 17ರವರೆಗೆ ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ, ವರಮಾನ ಮತ್ತು ಉಳಿತಾಯದ ಬಗ್ಗೆ ವೃತ್ತಿಪರರು ಹೊಂದಿರುವ ಸಕಾರಾತ್ಮಕ ಭಾವನೆಯು ತುಸು ಹೆಚ್ಚಾಗಿದೆ ಎನ್ನುವುದು ಜೂನ್‌ 1 ರಿಂದ 14ರವರೆಗೆ ನಡೆಸಿದ ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿದೆ ಎಂದು ತಿಳಿಸಿದೆ.

ಮುಂದಿನ ಆರು ತಿಂಗಳಿನಲ್ಲಿ ತಮ್ಮ ವರಮಾನ, ವೈಯಕ್ತಿಕ ವೆಚ್ಚ ಮತ್ತು ಉಳಿತಾಯವು ಹೆಚ್ಚಾಗಲಿದೆ ಎನ್ನುವುದು ನಾಲ್ವರು  ವೃತ್ತಿಪರರಲ್ಲಿ ಒಬ್ಬರ ಅಭಿಪ್ರಾಯವಾಗಿದೆ. 

1,351 ವೃತ್ತಿಪರರ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. ವರಮಾನ ಮತ್ತು ವೈಯಕ್ತಿಕ ವೆಚ್ಚವು ಹೆಚ್ಚಾಗಲಿದೆ ಎಂದು ನಾಲ್ವರಲ್ಲಿ ಒಬ್ಬರು ಹೇಳಿದ್ದು, ತಮ್ಮ ವೈಯಕ್ತಿಕ ಉಳಿತಾಯ ಮತ್ತು ಪಾವತಿಸಲೇಬೇಕಾದ ವ್ಯಕ್ತಿಗತ ಸಾಲಗಳೂ ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.

ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರಿಸಿರುವುದರಿಂದಲೇ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಶೇ 55ರಷ್ಟು ವೃತ್ತಿಪರರು ಅಭಿಪ್ರಾಯಪಟ್ಟಿದ್ದಾರೆ. 

ಕೆಲಸ ಮಾಡುವ ಸ್ಥಳವು ವಿಶಾಲವಾಗಿ ಇಲ್ಲದೇ ಇರುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ‌ಕೆಲಸಕ್ಕೆ ಹಿಂದಿರುಗಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಭಿಪ್ರಾಯವೂ ಸಮೀಕ್ಷೆಯಿಂದ ತಿಳಿದುಬಂದಿದೆ. 

ಸಮೀಕ್ಷೆಯ ವಿವರ

50%: ಕಾರ್ಪೊರೇಟ್ ಸೇವಾ ವೃತ್ತಿಪರರು

46%: ತಯಾರಿಕಾ ವಲಯದ ವೃತ್ತಿಪರರು

41%: ಶಿಕ್ಷಣ ಕ್ಷೇತ್ರದ ವೃತ್ತಿಪರರು

***

38%: ಅವಕಾಶ ಸಿಕ್ಕರೆ ಕೆಲಸ ಮಾಡುವ ಸ್ಥಳಕ್ಕೆ ಹಿಂದಿರುಗಲು ಸಿದ್ಧವಾಗಿರುವವರು

ಮೂವರಲ್ಲಿ ಒಬ್ಬರು

ಸುರಕ್ಷತಾ ಭಾವನೆ ಮೂಡುವವರೆಗೂ ಮನೆಯಲ್ಲಿಯೇ ಕೆಲಸ ಮಾಡುವುದಾಗಿ ಹೇಳಿರುವವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು