ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರೀನ್‌ಡೇಗೆ ಪಿ.ವಿ. ಸಿಂಧು ರಾಯಭಾರಿ

Published 3 ಜೂನ್ 2024, 15:42 IST
Last Updated 3 ಜೂನ್ 2024, 15:42 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಗ್ರೀನ್‌ಡೇ ಕಂಪನಿಯ ‘ಬೆಟರ್‌ ನ್ಯೂಟ್ರೀಷನ್‌’ನ ಬ್ರ್ಯಾಂಡ್‌ ರಾಯಭಾರಿ ಆಗಿದ್ದಾರೆ. 

ಜೈವಿಕ ಆಹಾರಗಳ ಮೂಲಕ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಕಡಿಮೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಗ್ರೀನ್‌ಡೇ ಜೊತೆಗಿನ ಸಿಂಧು ಅವರ ಪಾಲುದಾರಿಕೆಯು ಗ್ರಾಹಕರ ಆರೋಗ್ಯ ಮತ್ತು ರೈತರ ಏಳಿಗೆ ಎರಡನ್ನೂ ಗುರಿಯಾಗಿಟ್ಟುಕೊಂಡು ಬೆಳೆಗಳ ಪೌಷ್ಟಿಕಾಂಶದವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಸೋಮವಾರ ತಿಳಿಸಿದೆ.

‘ನಮ್ಮ ದೇಶದಲ್ಲಿ ಪೌಷ್ಟಿಕಾಂಶದ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಬ್ರ್ಯಾಂಡ್‌ನೊಂದಿಗೆ ಸಹಕರಿಸುವೆ’ ಎಂದು ಸಿಂಧು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಂಪನಿಯಲ್ಲಿ ಸಿಂಧು ಅವರು ಹೂಡಿಕೆ ಮಾಡಿದ್ದಾರೆ. ಆದರೆ ಹೂಡಿಕೆಯ ಮೊತ್ತವನ್ನು ಬಹಿರಂಗಪಡಿಸಿಲ್ಲ.

ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಹಳೆಯ ವಿದ್ಯಾರ್ಥಿಗಳಾದ ರಸ್ತೋಗಿ ಮತ್ತು ಐಶ್ವರ್ಯ ಭಟ್ನಾಗರ್ ಅವರು ಗ್ರೀನ್‌ಡೇ ನವೋದ್ಯಮ ಸ್ಥಾಪಿಸಿದ್ದಾರೆ. ಇದು ಪೋಷಕಾಂಶಯುಕ್ತ ಬೆಳೆಗಳನ್ನು ಬೆಳೆಸಲು ರೈತರೊಂದಿಗೆ ಕೆಲಸ ಮಾಡುತ್ತದೆ. 

ಗ್ರೀನ್‌ಡೇ ‘ಕಿಸಾನ್ ಕಿ ದುಕಾನ್’ ಬ್ರ್ಯಾಂಡ್‌ನ ಅಡಿಯಲ್ಲಿ ದೇಶಾದ್ಯಂತ ಸುಮಾರು 75 ಕೃಷಿ ಉತ್ಪನ್ನ ಮಳಿಗೆ ಮತ್ತು ಖರೀದಿ ಕೇಂದ್ರಗಳನ್ನು ಹೊಂದಿದೆ. ಪೌಷ್ಟಿಕಾಂಶಯುಕ್ತ ಗೋಧಿ ಹಿಟ್ಟು, ಅಕ್ಕಿ, ಜೋಳ, ರಾಗಿ ಮತ್ತು ಮೆಕ್ಕೆಜೋಳ ಮಾರಾಟ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT