ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

ಪುರವಣಿ
Last Updated 19 ನವೆಂಬರ್ 2019, 19:30 IST
ಅಕ್ಷರ ಗಾತ್ರ

ರಾಮಚಂದ್ರ ರಾವ್, ಧಾರವಾಡ

ಆದಾಯ ತೆರಿಗೆ ಹಾಗೂ ಬಂಡವಾಳ ವೃದ್ಧಿ ತೆರಿಗೆ ಇವುಗಳ ವ್ಯತ್ಯಾಸವೇನು? ಈ ಎರಡೂ ತೆರಿಗೆ ಒಟ್ಟಿಗೆ ಸೇರಿಸಿ, ತೆರಿಗೆ ಕೊಡಲು ಬರುವುದಿಲ್ಲವೇ? ದಯಮಾಡಿ ತಿಳಿಸಿರಿ.

ಉತ್ತರ: ಆದಾಯ ತೆರಿಗೆ ಹಾಗೂ ಬಂಡವಾಳ ವೃದ್ಧಿ ತೆರಿಗೆ ಇವುಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಆದಾಯ ತೆರಿಗೆಯಲ್ಲಿ ಎಲ್ಲಾ ವರ್ಗದ ಜನರಿಗೆ 1–4–2019 ರಿಂದ ಅಂತಹ ವ್ಯಕ್ತಿಗಳ ಆದಾಯ₹ 5 ಲಕ್ಷ ದಾಟಿದಲ್ಲಿ ಹಿಂದಿನಂತೆ ಕ್ರಮವಾಗಿ₹ 2.50 ಲಕ್ಷ,₹ 3 ಲಕ್ಷ್ಮ₹ 5 ಲಕ್ಷ ಮಿತಿಯನ್ನೆ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ಕೊಡುವ ತೆರಿಗೆ ಕೂಡಾ ಶೇ 5, ಶೇ 30 ಹೀಗೆ ಬೇರೆ ಬೇರೆ ವಿಧಗಳಿವೆ. ಇದೇ ವೇಳೆ ಬಂಡವಾಳ ವೃದ್ಧಿ ತೆರಿಗೆಯಲ್ಲಿ₹ 5 ಲಕ್ಷದ ಮಿತಿ ಅಥವಾ ಇತರೆ ತೆರಿಗೆ ಹಂತಗಳು (Slab System) ಇರುವುದಿಲ್ಲ. ಇಲ್ಲಿ 12 ತಿಂಗಳೊಳಗೆ ಬರುವ ಲಾಭ (ಅಲ್ಪಾವಧಿ) ಹಾಗೂ 12 ತಿಂಗಳ ನಂತರ ಬರುವ ಲಾಭ (ದೀರ್ಘಾವಧಿ) ಹೀಗೆ ಎರಡು ವಿಧಗಳಿವೆ. ಅಲ್ಪಾವಧಿ ಬಂಡವಾಳ ವೃದ್ಧಿ ಲಾಭ, ವ್ಯಕ್ತಿಯ ಒಟ್ಟು ಆದಾಯಕ್ಕೆ ಸೇರಿಸಿ, ಆದಾಯ ತೆರಿಗೆ ಕೊಡಬಹುದು ಹಾಗೂ ದೀರ್ಘಾವಧಿ ಲಾಭ ಪ್ರತ್ಯೇಕವಾಗಿ ಬಂಡವಾಳ ವೃದ್ಧಿ ತೆರಿಗೆ ಎಂದು ಪರಿಗಣಿಸಲಾಗುತ್ತಿದೆ. ಶೇ 20ರಷ್ಟು Capital Gain Tax ಕೊಡಬೇಕಾಗುತ್ತದೆ.

ರಾಮಚಂದ್ರ. ಪಿ. ಭದ್ರಾವತಿ

ನಾನು ಸಿಂಡಿಕೇಟ್‌ ಬ್ಯಾಂಕಿನ ನಿವೃತ್ತ ಅಧಿಕಾರಿ. ಹಿರಿಯ ನಾಗರಿಕರಿಗೆ ಸೆಕ್ಷನ್ 80 TTA ಆಧಾರದ ಮೇಲೆ₹ 10,000 ಹಾಗೂ 80 TTB ಆಧಾರದ ಮೇಲೆ₹ 50,000 ಒಟ್ಟಿನಲ್ಲಿ₹ 60,000 ವಿನಾಯಿತಿ ಪಡೆಯಬಹುದೇ ತಿಳಿಸಿರಿ.

ಉತ್ತರ: ಸೆಕ್ಷನ್ 80 TTA ಆಧಾರದ ಮೇಲೆ ಹಿರಿಯ ನಾಗರಿಕರಲ್ಲದವರೂ ಗರಿಷ್ಠ₹ 10,000 ಉಳಿತಾಯ ಖಾತೆಯಲ್ಲಿ ಬಂದಿರುವ ಬಡ್ಡಿಯಲ್ಲಿ ವಿನಾಯಿತಿ ಪಡೆಯಬಹುದು. ಇದೇ ವೇಳೆ ಹಿರಿಯ ನಾಗರಿಕರು ಸೆಕ್ಷನ್ 80TTA ಹಾಗೂ ಸೆಕ್ಷನ್ 80TTB ಆಧಾರದ ಮೇಲೆ ಉಳಿತಾಯ ಖಾತೆ ಹಾಗೂ ಠೇವಣಿಯಿಂದ ಬಂದ ಬಡ್ಡಿಯಲ್ಲಿ ಗರಿಷ್ಠ
₹ 50,000ರದವರೆಗೆ ವಿನಾಯಿತಿ ಪಡೆಯಬಹುದು. ನೀವು ತಿಳಿದಂತೆ
₹ 60,000 ಪಡೆಯುವಂತಿಲ್ಲ. ನೀವು ಪಿಂಚಣಿದಾರರು ಆಗಿರುವುದರಿಂದ, ಇದನ್ನು ಹೊರತುಪಡಿಸಿ ಸೆಕ್ಷನ್ 16 ಆಧಾರದ ಮೇಲೆ ಪ್ರತ್ಯೇಕವಾಗಿ
₹ 50,000 ಸ್ಟ್ಯಾಂಡರ್ಡ್ ಡಿಡಕ್ಷನ್‌ ಕೂಡಾ ಪಡೆಯಬಹುದು.

ಹೆಸರು, ಊರು ಬೇಡ

ನಾನು ಪ್ರಾಥಮಿಕ ಶಾಲಾ ಶಿಕ್ಷಕ. ನನ್ನ ಸಂಬಳ₹ 36,931, 12 ವರ್ಷ ಸೇವೆ ಸಲ್ಲಿಸಿದ್ದೇನೆ.₹ 10,815 ವಿಮಾ ಕಂತು ಕಟ್ಟುತ್ತೇನೆ. ನನಗೆ ವೈಯಕ್ತಿಕ ಸಾಲ₹ 6 ಲಕ್ಷವಿದೆ.₹ 15,000 ರಂತೆ ಸಾಲದ ಕಂತು ಕಟ್ಟುತ್ತೇನೆ. ಸಾಲ ತೀರಿಸಿ₹ 15,000 ರಂತೆ 5 ವರ್ಷದ ಆರ್‌.ಡಿ ಮಾಡಿದರೆ ಎಷ್ಟು ಹಣ ದೊರೆಯುತ್ತದೆ. ನನಗೆ 30X40 ನಿವೇಶನವಿದೆ. ಮನೆ ಕಟ್ಟಲು ಎಷ್ಟು ಸಾಲ ಸಿಗಬಹುದು. ಮಾರ್ಗದರ್ಶನ ಮಾಡಿ.

ಉತ್ತರ: ನೀವು ಸಾಧ್ಯವಾದರೆ ವೈಯಕ್ತಿಕ ಸಾಲ ತೀರಿಸಿ ತಕ್ಷಣ
₹ 15,000 ಆರ್.ಡಿ., 5 ವರ್ಷಗಳ ಅವಧಿಗೆ ಮಾಡಿರಿ. ಶೇ 7ರ ಬಡ್ಡಿ ದರದಲ್ಲಿ ಅಸಲು ಬಡ್ಡಿ ಸೇರಿಸಿ 5 ವರ್ಷ ಮುಗಿಯುತ್ತಲೇ₹ 10,78,920 ಪಡೆಯಿರಿ. ನೀವು ಸ್ವಂತ ನಿವೇಶನ ಹೊಂದಿರುವುದರಿಂದ ನಿಮ್ಮ ಸಾಲ ಮರು‍ಪಾವತಿಯ ಸಾಧ್ಯತೆ ಪರಿಗಣಿಸಿ ಗರಿಷ್ಠ₹ 15 ಲಕ್ಷ ಗೃಹ ಸಾಲ ದೊರೆಯಬಹುದು. ಗೃಹಸಾಲದ ಇ.ಎಂ.ಐ. (EMI)₹ 15,000 ಬರುತ್ತದೆ. ಸಾಲದ ಅವಧಿ 20 ವರ್ಷಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT