ಹೈದರಾಬಾದ್: ರಫೇಲ್ ಯುದ್ಧ ವಿಮಾನಗಳ ದೇಹದ ಮುಖ್ಯ ಭಾಗಗಳನ್ನು ಭಾರತದಲ್ಲಿಯೇ ತಯಾರಿಕೆ ಮಾಡಲು ಟಾಟಾ ಸಮೂಹಕ್ಕೆ ಸೇರಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಫ್ರಾನ್ಸ್ನ ಡಾಸೊ ಏವಿಯೇಷನ್ ಒಪ್ಪಂದ ಮಾಡಿಕೊಂಡಿವೆ.

ಈ ಒಪ್ಪಂದದ ಭಾಗವಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಕಂಪನಿಯು ಹೈದರಾಬಾದ್ನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ರಫೇಲ್ ಯುದ್ಧ ವಿಮಾನದ ಕೆಲವು ಪ್ರಮುಖ ಭಾಗಗಳು ಈ ಘಟಕದಲ್ಲಿ ತಯಾರಾಗಲಿವೆ ಎಂದು ಎರಡೂ ಕಂಪನಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.

ಮೊದಲ ಭಾಗಗಳು 2028ನೆಯ ಆರ್ಥಿಕ ವರ್ಷದಲ್ಲಿ ತಯಾರಾಗುವ ನಿರೀಕ್ಷೆ ಇದೆ. ಘಟಕವು ಪ್ರತಿ ತಿಂಗಳೂ ಈ ಯುದ್ಧ ವಿಮಾನದ ಎರಡು ಚೌಕಟ್ಟುಗಳನ್ನು ತಯಾರಿಸುವ ನಿರೀಕ್ಷೆ ಇದೆ. ರಫೇಲ್ ಯುದ್ಧ ವಿಮಾನದ ಚೌಕಟ್ಟುಗಳು ಫ್ರಾನ್ಸ್ನ ಹೊರಗಡೆ ತಯಾರಾಗಲಿರುವುದು ಇದೇ ಮೊದಲು.

‘ಭಾರತದಲ್ಲಿ ನಮ್ಮ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇದು ನಿರ್ಣಾಯಕ ಹೆಜ್ಜೆ’ ಎಂದು ಡಾಸೊ ಏವಿಯೇಷನ್ ಕಂಪನಿಯ ಸಿಇಒ ಎರಿಕ್ ಟ್ರಾಪಿಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.