ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಲ ಸಂಸ್ಥೆಗಳಿಂದ ಲಾಭ ಪಡೆದಿದ್ದ ರಾಣಾ’

Last Updated 9 ಮಾರ್ಚ್ 2020, 23:29 IST
ಅಕ್ಷರ ಗಾತ್ರ

ನವದೆಹಲಿ: ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ ಅವರು, ದಿವಾನ್‌ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌ (ಡಿಎಚ್‌ಎಫ್‌ಎಲ್‌) ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸಾಲ ನೀಡುವ ಮೂಲಕ ತಮ್ಮ ಕುಟುಂಬ ದವರ ಕಂಪನಿಗಳಿಗೆ ಪರೋಕ್ಷವಾಗಿ ಲಾಭ ಪಡೆದುಕೊಂಡಿದ್ದಾರೆ ಎಂದು ಸಿಬಿಐ ಶಂಕಿಸಿದೆ.

ಡಿಎಚ್ಎಲ್‌ನ ಅಲ್ಪಾವಧಿ ಡಿಬೆಂಚರ್‌ಗಳಲ್ಲಿ ₹3,700 ಕೋಟಿ ಹೂಡಿಕೆ ಮಾಡಲು, ₹600 ಕೋಟಿ ಲಾಭ ಪಡೆದಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದೆ.

ರಾಣಾಕಪೂರ್, ಪತ್ನಿ ಬಿಂದು, ಮೂವರು ಪುತ್ರಿಯರು ಹಾಗೂ ಡಿಎಚ್‌ಎಫ್‌ಎಲ್‌ ನಿರ್ದೇಶಕ ಕಪಿಲ್‌ ವಾಧವನ್‌ ಮತ್ತು ಸಹೋದರ ಧೀರಜ್‌ ಸೇರಿದಂತೆ 12 ಮಂದಿ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಡಿಎಚ್‌ಎಫ್‌ಎಲ್‌ ಸಂಸ್ಥೆಯ ಜೊತೆಗೆ ಡುಇಟ್‌ ಅರ್ಬನ್‌ ವೆಂಚರ್ಸ್‌, ಮೋರ್ಗನ್‌ ಕ್ರೆಡಿಟ್ಸ್‌, ಆರ್‌ಕೆಡಬ್ಲ್ಯು ಡೆವಲಪರ್ಸ್‌ ಮತ್ತಿತರ ಸಂಸ್ಥೆಗಳ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. ರಾಣಾ ಕಪೂರ್‌ ಅವರು ಇಂತಹ ವ್ಯವಹಾರಗಳಿಗಾಗಿ ತಮ್ಮ
ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಯೆಸ್‌ ಬ್ಯಾಂಕ್‌: ಆರೋಪಿಗಳಿಗೆ ಸಿಬೈ
ನವದೆಹಲಿ (ಪಿಟಿಐ):ಯೆಸ್ ಬ್ಯಾಂಕ್ ಹಗರಣದ ಆರೋಪಿರಾಣಾ ಕಪೂರ್ ಸೇರಿದಂತೆ 7 ಮಂದಿ ಆರೋಪಿಗಳು ದೇಶ ಬಿಟ್ಟು ತೆರಳದಂತೆ ತಡೆಯಲು ಸಿಬಿಐ ಸೋಮವಾರಲುಕ್‌ಔಟ್‌ ಸರ್ಕ್ಯುಲರ್‌ (ಎಲ್‌ಒಸಿ) ಹೊರಡಿಸಿದೆ ಎಂದುಅಧಿಕಾರಿಗಳು ತಿಳಿಸಿದ್ದಾರೆ.

ಕಪೂರ್‌ ಅವರ ಪತ್ನಿ ಬಿಂದು, ಮಕ್ಕಳಾದ ರೋಶ್ನಿ, ರಾಖಿ ಮತ್ತು ರಾಧಾ ಹಾಗೂ ಡಿಎಚ್‌ಎಫ್‌ಎಲ್‌ನ ಕಪಿಲ್‌ ವಾದವನ್‌, ಧೀರಜ್‌ ವಾದವನ್‌ ಅವರನ್ನು ಸುತ್ತೋಲೆಯಲ್ಲಿ ಹೆಸರಿಸಲಾಗಿದೆ ಎಂದು ಹೇಳಿದ್ದಾರೆ. ಭಾನುವಾರ ಲಂಡನ್‌ಗೆ ತೆರಳಲು ಪ್ರಯತ್ನಿಸಿದ್ದಕಪೂರ್‌ ಪುತ್ರಿ ರೋಶ್ನಿ ಅವರಿಗೆ ಜಾರಿ ನಿರ್ದೇಶನಾಲಯ ಎಲ್‌ಒಸಿ ನೀಡಿತ್ತು.

ತಪಾಸಣೆ:ಹಗರಣದ ಪ್ರಮುಖ ಆರೋಪಿ ರಾಣಾ ಕಪೂರ್‌ ಕುಟುಂಬಕ್ಕೆ ಸೇರಿದ ಮುಂಬೈನ ಏಳು ಸ್ಥಳಗಳಲ್ಲಿ ಸಿಬಿಐ ತಪಾಸಣೆ ನಡೆಸಿಮಾಹಿತಿ ಸಂಗ್ರಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT