ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೂರ್ ವೈಶ್ಯ ಬ್ಯಾಂಕ್: ನೇರ ತೆರಿಗೆ ಪಾವತಿಗೆ ಅನುಮತಿ

Last Updated 15 ಅಕ್ಟೋಬರ್ 2021, 11:16 IST
ಅಕ್ಷರ ಗಾತ್ರ

ಬೆಂಗಳೂರು: ಕರೂರ್ ವೈಶ್ಯ ಬ್ಯಾಂಕ್‌ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಪರವಾಗಿ ನೇರ ತೆರಿಗೆಗಳನ್ನು ಸಂಗ್ರಹಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ಅನುಮತಿ ನೀಡಿದೆ.

ಅನುಮತಿ ದೊರೆತ ನಂತರ ಬ್ಯಾಂಕ್‌, ಸಿಬಿಡಿಟಿ ಜೊತೆ ಕೆಲವು ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಅವು ಪೂರ್ಣಗೊಂಡ ನಂತರದಲ್ಲಿ ಗ್ರಾಹಕರು ನೇರ ತೆರಿಗೆ ಮೊತ್ತವನ್ನು ಬ್ಯಾಂಕ್‌ನ ಯಾವುದೇ ಶಾಖೆಯ ಮೂಲಕ ಪಾವತಿ ಮಾಡಬಹುದು. ಇಂಟರ್ನೆಟ್‌ ಬ್ಯಾಂಕಿಂಗ್ ಅಥವಾ ಮೊಬೈಲ್ ಆ್ಯಪ್ ಮೂಲಕವೂ ನೇರ ತೆರಿಗೆ ಮೊತ್ತ ಪಾವತಿ ಮಾಡಬಹುದು ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

‘ನೇರ ತೆರಿಗೆಗಳನ್ನು ಪಾವತಿಸಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯು ನಮ್ಮ ಗ್ರಾಹಕರಿಂದ ಬಹಳ ಕಾಲದಿಂದಲೂ ಇತ್ತು’ ಎಂದು ಕರೂರ್ ವೈಶ್ಯ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ. ರಮೇಶ್ ಬಾಬು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT