ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಬಿಐಗೆ ‘ಅಪಾಯ ನಿರ್ವಾಹಕ’ ಪ್ರಶಸ್ತಿ

Published 16 ಜೂನ್ 2024, 14:29 IST
Last Updated 16 ಜೂನ್ 2024, 14:29 IST
ಅಕ್ಷರ ಗಾತ್ರ

ಮುಂಬೈ: ಲಂಡನ್‌ ಮೂಲದ ಸೆಂಟ್ರಲ್‌ ಬ್ಯಾಂಕಿಂಗ್‌ ಪ್ರಕಾಶನಾಲಯವು ಕೊಡಮಾಡುವ 2024ನೇ ಸಾಲಿನ ‘ಅಪಾಯ ನಿರ್ವಾಹಕ’ (ರಿಸ್ಕ್‌ ಮ್ಯಾನೇಜರ್‌) ಪ್ರಶಸ್ತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಭಾಜನವಾಗಿದೆ. 

ಆರ್ಥಿಕ ಅಪಾಯ ತಡೆ ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಮತ್ತಷ್ಟು ಸುಧಾರಣಾ ಕ್ರಮಕೈಗೊಳ್ಳಲು ಈ ಪ್ರಶಸ್ತಿಯು ಪ್ರೇರಣೆ ನೀಡಲಿದೆ ಎಂದು ಆರ್‌ಬಿಐ ‘ಎಕ್ಸ್‌’ನಲ್ಲಿ ತಿಳಿಸಿದೆ. 

ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಆರ್‌ಬಿಐ ಪರವಾಗಿ ಕಾರ್ಯ ನಿರ್ವಾಹಕ ನಿರ್ದೇಶಕ ಮನೋರಂಜನ್‌ ಮಿಶ್ರಾ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT