ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಸುರಕ್ಷತೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಗುಡುವು

ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ
Last Updated 15 ಜೂನ್ 2019, 20:00 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ಗಳ ಎಟಿಎಂಗಳನ್ನು ಕಳವು ಮಾಡುವುದನ್ನು ತಪ್ಪಿಸಲು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚನೆ ನೀಡಿದೆ.

ಎಟಿಎಂಗಳನ್ನು ಹೊತ್ತೊಯ್ಯಲು ಸಾಧ್ಯವಾಗದೇ ಇರುವಂತೆ ಗೋಡೆ, ನೆಲಕ್ಕೆ ಅಳವಡಿಸಲು ಸೆಪ್ಟೆಂಬರ್‌ ತಿಂಗಳ ಗಡುವು ನೀಡಿದೆ. ಆದರೆ, ವಿಮಾನ ನಿಲ್ದಾಣಗಳಂತಹ ಹೆಚ್ಚಿನ ಭದ್ರತೆ ಇರುವ ಪ್ರದೇಶಗಳಿಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ ಅಲ್ಲಿ ರಾಜ್ಯ ಅಥವಾ ಕೇಂದ್ರ ಸುರಕ್ಷತಾ ಸಿಬ್ಬಂದಿಯೂ ಇರುತ್ತಾರೆ ಎಂದು ಹೇಳಿದೆ.

ಎಟಿಎಂಗಳನ್ನೇ ಹೊತ್ತೊಯ್ಯುತ್ತಿರುವ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐ ಈ ಸೂಚನೆ ನೀಡಿದೆ.

ಸೂಚನೆಗಳನ್ನು ಸಕಾಲಕ್ಕೆ ಪಾಲಿಸದೇ ಇದ್ದರೆ ದಂಡವನ್ನೂ ಒಳಗೊಂಡು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದೆ.

ಎಟಿಎಂಗಳ ಸುರಕ್ಷತೆಯ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಆರ್‌ಬಿಐ 2016ರಲ್ಲಿ ಕಮಿಟಿ ಆನ್‌ ಕರೆನ್ಸಿ ಮೂವ್‌ಮೆಂಟ್‌ (ಸಿಸಿಎಂ) ರಚನೆ ಮಾಡಿತ್ತು. ಸಮಿತಿಯ ಶಿಫಾರಸಿನ ಮೇಲೆ ಈ ಸೂಚನೆಗಳನ್ನು ನೀಡಿದೆ.

ಒನ್‌ ಟೈಮ್‌ ಕಾಂಬಿನೇಷನ್‌ (ಒಟಿಸಿ) ಲಾಕ್‌ ಮೂಲಕವೇ ಎಟಿಎಂಗಳಿಗೆ ನಗದು ಭರ್ತಿ ಮಾಡಬೇಕು.ತಕ್ಷಣಕ್ಕೆ ಎಚ್ಚರಿಕೆ ನೀಡುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವಂತೆ ಮಾಡಲು ಆನ್‌ಲೈನ್‌ ಕಣ್ಗಾವಲು ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಗಮನ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT