ಗುರುವಾರ , ಡಿಸೆಂಬರ್ 5, 2019
21 °C

‘ಸಹಕಾರಿ ಬ್ಯಾಂಕ್‌ಗಳ ನಿಯಂತ್ರಣಆರ್‌ಬಿಐಗೆ ಹೆಚ್ಚಿನ ಅಧಿಕಾರ ಅಗತ್ಯ’

Published:
Updated:
Prajavani

ನವದೆಹಲಿ: ಸಹಕಾರಿ ಬ್ಯಾಂಕ್‌ಗಳನ್ನು ನಿಯಂತ್ರಿಸಲು ಆರ್‌ಬಿಐಗೆ ಹೆಚ್ಚಿನ ಅಧಿಕಾರಿ ನೀಡು
ವಂತೆ ಕೇಂದ್ರೀಯ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕ ಸತೀಶ್‌ ಮರಾಠೆ ಅವರು ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.

ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್‌ ಹಗರಣದಿಂದ ಗ್ರಾಹಕರಿಗೆ  ಠೇವಣಿ ಹಣ ಪಡೆಯಲು ಕಷ್ಟವಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅವರು ಈ ಸಲಹೆ ನೀಡಿದ್ದಾರೆ.

ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿರುವ ಅವರು, ಸಹಕಾರಿ ಬ್ಯಾಂಕಿಂಗ್‌ ವಲಯದ ಕಾರ್ಯವೈಖರಿಯ ಬಗ್ಗೆ ದೂರದೃಷ್ಟಿ ಇರುವ ರೂಪುರೇಷೆಯೊಂದನ್ನು
ಸಿದ್ಧಪಡಿಸುವ ಅಗತ್ಯ ಇದೆ ಎಂದೂ ಸಲಹೆ ನೀಡಿದ್ದಾರೆ.

ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಬೇಕಾಗಿದೆ. ಆರ್‌ಬಿಐ, ಹಣಕಾಸು ಸಚಿವಾಲಯ, ಕೃಷಿ ಸಚಿವಾಲಯ ಮತ್ತು ಆರ್ಥಿಕವಾಗಿ ಉತ್ತಮವಾಗಿರುವ ಕನಿಷ್ಠ ಎರಡು ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳು ಈ ಸಮಿತಿಯಲ್ಲಿ ಇರಬೇಕು ಎಂದೂ ತಿಳಿಸಿದ್ದಾರೆ.

ಮಲ್ಟಿ ಸ್ಟೇಟ್‌ ಕೋಆಪರೇಟಿವ್‌ ಸೊಸೈಟಿ ಆ್ಯಕ್ಟ್‌ ಒಂದಕ್ಕೇ ತಿದ್ದುಪಡಿ ತಂದರೆ ಸಾಲದು. ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೇ ತಿದ್ದುಪಡಿ ತರುವ ಮೂಲಕ ಸಹಕಾರಿ ಬ್ಯಾಂಕ್‌ಗಳ ನಿಯಂತ್ರಣಕ್ಕೆ ಆರ್‌ಬಿಐಗೆ ಹೆಚ್ಚಿನ ಅಧಿಕಾರ ಸಿಗುವಂತೆ ಮಾಡಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)