ಸೋಮವಾರ, ಮಾರ್ಚ್ 8, 2021
25 °C

ಮುಷ್ಕರ ಕೈಬಿಟ್ಟ ಆರ್‌ಬಿಐ ಸಿಬ್ಬಂದಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಮಂಗಳವಾರದಿಂದ ಎರಡು ದಿನಗಳ ಕಾಲ (ಸೆ. 4 ಮತ್ತು 5ರಂದು) ಮುಷ್ಕರ ನಡೆಸುವ ನಿರ್ಧಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಂಯುಕ್ತ ವೇದಿಕೆಯು (ಯುಎಫ್‌ಆರ್‌ಬಿಒಇ)  ಕೈಬಿಟ್ಟಿದೆ.

ಆರ್‌ಬಿಐನ ಆಡಳಿತ ಮಂಡಳಿ ಜತೆ ನಡೆದ ಸಂಧಾನ ಮಾತುಕತೆ ನಂತರ ವೇದಿಕೆಯು ಈ ನಿರ್ಧಾರಕ್ಕೆ ಬಂದಿದೆ.

ಬೇಡಿಕೆ ಈಡೇರಿಸಲು ಇನ್ನಷ್ಟು ಸಮಯಾವಕಾಶ ನೀಡಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿಕೊಂಡಿರುವುದರಿಂದ ಮುಷ್ಕರ ಕೈಬಿಡಲಾಗಿದೆ ಎಂದು ಯುಎಫ್‌ಆರ್‌ಬಿಒಇ ಹೇಳಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎರಡು ದಿನಗಳ ಕಾಲ ಸಾಮೂಹಿಕ ರಜೆ ಹಾಕಲು ಆರ್‌ಬಿಐ ಉದ್ಯೋಗಿಗಳ ವೇದಿಕೆಯು ತನ್ನ ಸದಸ್ಯರಿಗೆ ಇದಕ್ಕೂ ಮೊದಲು ಕರೆ ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು