ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2021–22ನೇ ಹಣಕಾಸು ವರ್ಷದಲ್ಲಿ 65.11 ಟನ್ ಚಿನ್ನ ಖರೀದಿ ಮಾಡಿದೆ. ಇದರಿಂದಾಗಿ ಒಟ್ಟಾರೆ ಚಿನ್ನದ ಮೀಸಲು ಸಂಗ್ರಹವು 760.42 ಟನ್‌ಗಳಿಗೆ ತಲುಪಿದೆ.

2020–21ನೇ ಹಣಕಾಸು ವರ್ಷದಲ್ಲಿ ಆರ್‌ಬಿಐ ಬಳಿ 695.11 ಟನ್ ಚಿನ್ನದ ಸಂಗ್ರಹ ಇತ್ತು. ಚಿನ್ನದ ಮೌಲ್ಯವು ₹ 1.43 ಲಕ್ಷ ಕೋಟಿಯಿಂದ ₹ 1.96 ಲಕ್ಷ ಕೋಟಿಗೆ ಶೇ 37.11ರಷ್ಟು ಏರಿಕೆ ಆಗಿದೆ ಎಂದು ಆರ್‌ಬಿಐ ಹೇಳಿದೆ.

ಚಿನ್ನದ ಬೆಲೆ ಹೆಚ್ಚಳ ಆಗಿರುವುದು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಆಗಿರುವುದೇ ಚಿನ್ನದ ಮೌಲ್ಯ ಮತ್ತು ಸಂಗ್ರಹ ಹೆಚ್ಚಳಕ್ಕೆ ಕಾರಣ ಎಂದು ವರದಿಯಲ್ಲಿ ತಿಳಿಸಿದೆ.

ಮೇ 20ಕ್ಕೆ ಕೊನೆಗೊಂಡ ವಾರದಲ್ಲಿ ಆರ್‌ಬಿಐ ಬಳಿ ಇರುವ ಚಿನ್ನದ ಮೀಸಲು ಸಂಗ್ರಹವು ₹ 3.14 ಲಕ್ಷ ಕೋಟಿಗೆ ಏರಿಕೆ ಆಗಿದೆ.

ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹ 32,571 ಕೋಟಿ ಹೆಚ್ಚಾಗಿ ₹ 46 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ. ಮೇ 13ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹದಲ್ಲಿ ಇಳಿಕೆ ಕಂಡಿತ್ತು.

ಮೀಸಲು ಸಂಗ್ರಹದಲ್ಲಿ ಅತಿ ಹೆಚ್ಚಿನ ಪಾಲು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹವು ₹ 41.04 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ ಎಂದು ತಿಳಿಸಿದೆ.

ಅಂತರರಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಭಾರತದ ಮೀಸಲು ಸಂಗ್ರಹವು ₹ 392 ಕೋಟಿ ಏರಿಕೆ ಕಂಡು ₹ 38,500 ಕೋಟಿಗೆ ಏರಿಕೆ ಆಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.